ಕೊರೊನಾ ಭೀತಿ: ಕರ್ನಾಟಕ ಬಹುತೇಕ ಸ್ತಬ್ಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಇಂದಿನಿಂದ ಒಂದು ವಾರ ಕಾಲ ಕರ್ನಾಟಕದಲ್ಲಿ ಮಾಲ್, ಸಿನಿಮಾ ಥಿಯೇಟರ್, ಪಬ್, ನೈಟ್​ ಕ್ಲಬ್, ಸಭೆ ಸಮಾರಂಭ, ಜಾತ್ರೆ ಬಂದ್ ಆಗಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಬಹುತೇಕ ಸ್ತಬ್ಧಗೊಂಡಿದೆ.

ಕೊರೋನಾ ಭೀತಿ ದೇವಾಲಯಗಳಿಗೂ ತಟ್ಟಿದ್ದು, ರಾಜ್ಯದಲ್ಲಿ ಬಹುತೇಕ ದೇವಾಲಯಗಳು ಖಾಲಿ ಖಾಲಿಯಾಗಿವೆ. ಭಕ್ತರ ಸಂಖ್ಯೆಯಲ್ಲಿ ತೀವ್ರ ಇಳಿಮುಖ ಕಂಡುಬಂದಿದೆ. ಇನ್ನು ದೇವಾಲಯಗಲಲ್ಲಿ ತೀರ್ಥ, ಪ್ರಸಾದ, ಅನ್ನ ದಾಸೋಹಗಳನ್ನು ರದ್ದು ಮಾಡಲಾಗಿದೆ.

ಬೆಂಗಳೂರಿನಲ್ಲಿ ಚಿತ್ರಮಂದಿರಗಳು, ಮಾಲ್ ಗಳು, ಬಹುತೇಕ ಶಾಲೆಗಳು ಬಂದ್ ಆಗಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರ ಓಡಾಟ ಕೂಡ ವಿರಳವಾಗಿದೆ. ಇನ್ನು ಜಿಮ್ ಗಳನ್ನ ಬಂದ್ ಮಾಡಬೇಕು ಎಂದು ಸರಕಾರದ ಆದೇಶವಿದ್ದರೂ ಜಿಮ್ ಸಿಬ್ಬಂದಿಗಳು ನಮಗೆ ಯಾವುದೇ ಆದೇಶಗಳು ಬಂದಿಲ್ಲ ಎಂದು ಹೇಳುವ ಮೂಲಕ ನಿರ್ಲಕ್ಷ್ಯ ವಹಿಸಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ, ತಾರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಯಥಾಸ್ಥಿತಿ ಕಂಡುಬಂದಿದೆ. ಆದರೆ ಜಿಲ್ಲಾಡಳಿತದ ಆದೇಶ ಹಿನ್ನಲೆಯಲ್ಲಿ ಮಾಂಗಳೂರಿನಲ್ಲಿ ಮಾಲ್ ಗಳನ್ನು ಬಂದ್ ಮಾಡಲಾಗುತ್ತಿದೆ.

ಹಾಸನ ನಗರದಾದ್ಯಂತ ಬಿಗ್ ಬಜಾರ್, ಮೋರ್, ಥಿಯೇಟರ್ ಸೇರಿ ಪ್ರಮುಖ ಮಾಲ್ ಗಳು ಬಾಂದ್ ಆಗಿದ್ದು, ಬಿಕೋ ಎನ್ನುತ್ತಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button