ಫಸ್ಟ್ ನೈಟ್ ಮುಂಚೆ ಬಂತು ಪತ್ನಿಯ ಸೆಕ್ಸ್ ವಿಡೀಯೋ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನವ ವಿವಾಹಿತ ಜೋಡಿಯ ಫ‌ಸ್ಟ್‌ನೈಟ್‌ಗೆ ಮನೆಯವರೆಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಎರಡು ದಿನ ಇದೆ ಎನ್ನುವಾಗ ಪತಿಯ ಮೊಬೈಲಿಗೆ ಪತ್ನಿಯ ಸೆಕ್ಸ್ ವಿಡಿಯೋ ಹಾಗೂ ಫೋಟೋಗಳು ಬಂದಿದೆ. ಇದನ್ನು ನೋಡಿದ ಆಘಾತಕ್ಕೊಳಗಾದ ಪತಿ ತನ್ನ ಪತ್ನಿ ಹಾಗೂ ಕುಟುಂಬಸ್ಥರ ವಿರುದ್ಧ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಹಾಸನ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ ಚಿಕ್ಕಮಗಳೂರಿನ ನ್ಯಾಯಾಲಯವೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾಳೆ. 2019 ಜೂನ್ 30ರಂದು ಮಹಿಳೆಯ ಕುಟುಂಬಸ್ಥರು 1.25 ಲಕ್ಷ ರೂ. ಖರ್ಚು ಮಾಡಿ ಮಗಳ ನಿಶ್ಚಿತಾರ್ಥವನ್ನು ನಿರಂಜನ್ ಜೊತೆ ಮಾಡಿದ್ದರು. ನಿಶ್ಚಿತಾರ್ಥ ಆಗಿ ಆರು ತಿಂಗಳ ಬಳಿಕ ನವೆಂಬರ್ 24ರಂದು ಇಬ್ಬರು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಮಹಿಳೆ 10 ದಿನ ಮಾತ್ರ ತನ್ನ ಪತಿಯ ಜೊತೆ ಸುಬ್ರಹ್ಮಣ್ಯನಗರದಲ್ಲಿರುವ ಮನೆಯಲ್ಲಿದ್ದಳು.

ಡಿ. 15ರಂದು ಮೊದಲರಾತ್ರಿ ನಿಗದಿಯಾಗಿತ್ತು. ಫ‌ಸ್ಟ್‌ನೈಟ್‌ಗೆ ಎರಡು ದಿನ ಇರುವಾಗ ಪ್ರಮೋದ್ ಕುಮಾರ್ ಎಂಬವನು ಪತಿಯ ಫೇಸ್‍ಬುಕ್ ಮೆಸೆಂಜರ್ ಗೆ ಪತ್ನಿಯ ನಗ್ನ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾನೆ. ಅಲ್ಲದೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಈ ನಂಬರಿಗೆ ಕರೆ ಮಾಡು ಎಂದು ಮೊಬೈಲ್ ಸಂಖ್ಯೆ ಕೂಡ ಕಳುಹಿಸಿದ್ದನು. ನಂಬರ್ ಗೆ ಕರೆ ಮಾಡಿದ ಪತಿ ಕರೆಯನ್ನು ವಿಜಯ್‍ಕುಮಾರ್ ಎಂಬುವವರು ಸ್ವೀಕರಿಸಿದ್ದಾರೆ. ಫೋಟೋ ಹಾಗೂ ವಿಡಿಯೋ ಬಗ್ಗೆ ವಿಚಾರಿಸಿದಾಗ ನಾನು ಹಾಗೂ ನಿನ್ನ ಪತ್ನಿ 7 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಅಲ್ಲದೆ ನಿಮ್ಮ ನಿಶ್ಚಿತಾರ್ಥವಾದ ಬಳಿಕ ನಾವಿಬ್ಬರು ದೈಹಿಕ ಸಂಪರ್ಕ ಹೊಂದಿದ್ದೇವು. ಅದೇ ಫೋಟೋ ಹಾಗೂ ವಿಡಿಯೋಗಳು ಈಗ ನಿನಗೆ ಸಿಕ್ಕಿರುವುದು ಎಂದು ಹೇಳಿದ್ದಾನೆ. ಅಲ್ಲದೇ ಪತ್ನಿಯ ಜತೆಗಿನ ಚಾಟಿಂಗ್ ಮೆಸೇಜ್‍ಗಳನ್ನು ಸ್ಕ್ರೀನ್‍ಶಾಟ್ ತೆಗೆದು ನಿರಂಜನ್ ಗೆ ಕಳುಹಿಸಿದ್ದಾನೆ.

ಮಾನಸಿಕವಾಗಿ ನೊಂದ ನಿರಂಜನ್ ಹಾಗೂ ಆತನ ಕುಟುಂಬಸ್ಥರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿಜಯ್‍ಕುಮಾರ್ ಹಾಗೂ ಮಹಿಳೆಯನ್ನು ವಿಚಾರಣೆ ನಡೆಸಿದಾಗ  ಇಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button