ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಮಗಿದ್ದ ಥೈರಾಯ್ಡ್ ರೋಗದಿಂದ ಮನನೊಂದ ಗ್ರಾಮದ ವಿವಾಹಿತ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಸಾವಿಗೆ ಶರಣಾದ ಘಟನೆ ತಾಲ್ಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.
ಮೃತರನ್ನು ಅದೇ ಗ್ರಾಮದ ನಿವಾಸಿ ರಮೀಜಾ ಶಬ್ಬೀರಹ್ಮದ ಬಸರಿಕಟ್ಟಿ (56) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯರಾತ್ರಿಯ ಬಳಿಕ ತಮ್ಮ ಮನೆಯ ಮೇಲ್ಛಾವಣಿಗೆ ತೆರಳಿದ ರಮೀಜಾ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಿದ್ದಾರೆ. ಬಳಿಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಘಟನೆಯ ತನಿಖೆ ಕೈಗೊಂಡ ಖಾನಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತಮ್ಮ ಅನಾರೋಗ್ಯದಿಂದ ಬೇಸತ್ತ ತಾಲ್ಲೂಕಿನ ಬರಗಾಂವ ಗ್ರಾಮದ
ನಿವಾಸಿ ಲಕ್ಷ್ಮೀ ಸುತಾರ (68) ತಮಗಿದ್ದ ಕ್ಯಾನ್ಸರ್ ರೋಗದಿಂದ ಬೇಸತ್ತು ಗ್ರಾಮದ ಹೊರವಲಯದ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತಮ್ಮ ಅನಾರೋಗ್ಯದಿಂದ ಬೇಸತ್ತ ತಾಲ್ಲೂಕಿನ ಬರಗಾಂವ ಗ್ರಾಮದ
ನಿವಾಸಿ ಲಕ್ಷ್ಮೀ ಸುತಾರ (68) ತಮಗಿದ್ದ ಕ್ಯಾನ್ಸರ್ ರೋಗದಿಂದ ಬೇಸತ್ತು ಗ್ರಾಮದ ಹೊರವಲಯದ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ಪೀಡಿತರಾಗಿದ್ದ ಲಕ್ಷ್ಮೀ ಮಾನಸಿಕವಾಗಿ ಅಸ್ವಸ್ಥರಾಗಿದ್ದರು.
ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ.
ಖಾನಾಪುರ ಪೊಲೀಸರು ಎರಡೂ ಪ್ರಕರಣಗಳು ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಗಳ
ತನಿಖೆಯನ್ನು ಕೈಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಪಟ್ಟಣದ ಸಾರ್ವಜನಿಕ
ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ
ಹಸ್ತಾಂತರಿಸಲಾಗಿದ್ದು, ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ