ಹಾವೇರಿ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎ.14ರವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಬಡವರು, ಕೂಲಿಕಾರ್ಮಿಕರು, ಅಲೆಮಾರಿಗಳು ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕೃಷಿ ಸಚಿವ ಬಿ.ಸಿ ಪಾಟೀಲ್ ಬಡವರಿಗೆ ಹಾಗೂ ಅಲೆಮಾರಿಗಳಿಗೆ ದಿನಸಿ ವಿತರಿಸಿದರು.
ಕೊರೊನಾ ಭೀತಿಯಿಂದ ಪದೇಪದೇ ಜಾಗ ಖಾಲಿ ಮಾಡಬೇಕಾಗಿದ್ದು, ಎಪ್ಪತ್ತಕ್ಕೂ ಹೆಚ್ಚು ಜನರು ಊಟ ಸಿಗದೇ ಪರದಾಡುವುದನ್ನು ಗಮನಿಸಿದ ಸಚಿವರು ಇಂದು ಬೆಳಿಗ್ಗೆ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಅಲೆಮಾರಿಗಳನ್ನು ಭೇಟಿಯಾಗಿ ದಿನಸಿ ವಿತರಿಸಿದರು.
ಕೊರೋನಾ ಹಿನ್ನಲೆಯಲ್ಲಿ ಯಾವ ಗ್ರಾಮದಲ್ಲಿಯೂ ತಮ್ಮನ್ನು ಬಿಟ್ಟುಕೊಳ್ಳುತ್ತಿಲ್ಲ. ಯಾರೂ ಸಹ ಭಿಕ್ಷೆ ನೀಡುತ್ತಿಲ್ಲ ಎಂದು ಸಚಿವರಿಗೆ ಅಲೆಮಾರಿಗಳು ಮನವಿ ಮಾಡಿದ್ದರು. ಅಲೆಮಾರಿಗಳ ಮನವಿಗೆ ಸ್ಪಂದಿಸಿದ ಬಿ.ಸಿ.ಪಾಟೀಲ್ ದಿನಸಿಗಳನ್ನು ವಿತರಿಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ