Latest

ಗೊಂದಲಕ್ಕೆ ತೆರೆ ಎಳೆದ ಸರಕಾರ: ಬೆಳಗಾವಿಯಲ್ಲಿ 3 ಪಾಸಿಟಿವ್ ನಿಜ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಸಂಬಂಧ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ.

ಇನ್ನು ಮುಂದೆ ಜಿಲ್ಲಾಧಿಕಾರಿಗಳಿಗೆ ಕೊರೋನಾ ಪಾಸಿಟಿವ್ ಕುರಿತು ಮಾಹಿತಿ ನೀಡುವ ಅಧಿಕಾರ ಇಲ್ಲ. ರಾಜ್ಯ ಸರಕಾರವೇ ಮಾಹಿತಿ ನೀಡಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇಂದು ಬೆಳಗಾವಿಯಲ್ಲಿ ಯಾವುದೇ ಪಾಸಿಟಿವ್ ವರದಿ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದ್ದರೆ, 3 ಪಾಸಿಟಿವ್ ವರದಿ ಬಂದಿದೆ ಎಂದು ರಾಜ್ಯಸರಕಾರ ಹೇಳಿತ್ತು. ಇದರಿಂದ ಸರಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಸಾರ್ವಜವಿಕರಲ್ಲೂ ತೀವ್ರ ಗೊಂದಲ ಉಂಟಾಗುವಂತಾಗಿತ್ತು.

ಈ ಸಂಬಂಧ ಪ್ರಗತಿವಾಹಿನಿ ವರದಿ ಪ್ರಕಟಿಸಿತ್ತು. ರಾಜ್ಯ ಸರಕಾರ -ಜಿಲ್ಲಾಡಳಿತ : ಒಂದಕ್ಕೊಂದು ತಾಳೆಯಾಗದ ವರದಿಗಳು

ರಾಜ್ಯದಲ್ಲಿ ಇಂದು ನಾಲ್ಕು ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆಯಲ್ಲಿ ಒಂದು ಮತ್ತು ಬೆಳಗಾವಿಯಲ್ಲಿ ಮೂರು ಜನ ಸೋಂಕಿತರು ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 128 ಆಗಿದೆ. ಬೆಳಗಾವಿಯಲ್ಲಿ ಕೊರೋನಾ ದೃಢಪಟ್ಟ ಮೂವರೂ ನಿಜಾಮುದ್ದೀನ್ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button