ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಮೇಶ್ ಜಾರಕಿಹೊಳಿ ನನಗೆ ಸಿಗ್ತಾ ಇಲ್ಲ. ಪೋನ್ ಮಾಡಿದ್ರೆ ಎತ್ತುತ್ತಿಲ್ಲ. ನಾನು ಅವರನ್ನು ಸಂಪರ್ಕಿಸಲು ಟ್ರಾಯ್ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ರಮೇಶ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ರಮೇಶ್ ಗೆ ನನ್ನ ಮೇಲೆ ಕೋಪವಿಲ್ಲ. ನನ್ನ ಜೊತೆಗೆ ಆತ್ಮೀಯರಾಗಿದ್ದಾರೆ.ರಮೇಶ್, ನಾಗೇಂದ್ರ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಸುಮ್ಮನೆ ಬಿಜೆಪಿಯವರು ಸುದ್ದಿ ಮಾಡತ್ತಿದ್ದಾರೆ ಎಂದರು.
ಸಂಕ್ರಾಂತಿಗೆ ಕ್ರಾಂತಿ ನಡೆಯುತ್ತದೆ ಎನ್ನುವ ವದಂತಿ ಕುರಿತು ಕೇಳಿದಾಗ, ನಗುನಗುತ್ತಲೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಏನ್ ಕಾಂತ್ರಿ ಬಗ್ಗೆ ಗೊತ್ತು. ಅವರು ಯಾವತ್ತಾದ್ರೂ ಕ್ರಾಂತಿ ಮಾಡಿದ್ದಾರಾ. ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲದವರು. ಈಗೇನು ಕ್ರಾಂತಿ ಮಾಡ್ತಾರೆ.
ಅಧಿಕಾರಕ್ಕಾಗಿ ಬಿಜೆಪಿ ಹಾಗ್ ಮಾಡ್ತಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ದ ಬಗ್ಗೆ ಮಾತನಾಡಿ, ಈವರೆಗೂ ಆ ಬಗ್ಗೆ ನಿರ್ಧಾರ ಆಗಿಲ್ಲ. ಕುಳಿತುಕೊಂಡು ನಿರ್ಧಾರ ಮಾಡ್ತಿವಿ. ಬಿಜೆಪಿ ಸೋಲಿಸುವ ನಿಟ್ಟಿನಲ್ಲಿ ನಾವು ಚರ್ಚಿಸಿ ತೀರ್ಮಾನ ಮಾಡ್ತಿವಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ