ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- : ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಲಾಗಿದೆ.
ಮಾ.24 ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 353 ದಾಳಿಗಳನ್ನು ನಡೆಸಿ, 37 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 21 ಆರೋಪಿಗಳನ್ನು ಬಂಧಿಸಿ 12.340ಲೀ ಮದ್ಯ, 27 ಗೋವಾ ಮದ್ಯ 40 ಸೇಂಧಿ, 50ಲೀ ಬೆಲ್ಲದ ಕೊಳೆ, 17.28೦೨೬ ಸಂತ್ರಾ. 10ಲೀ ಕಾಜು 537.900ಲೀ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು 25 ದ್ವಿಚಕ್ರ ವಾಹನ. 01 ಆಟೋ ರಿಕ್ಷಾ. 02 ಗೂಡ್ಸ್ ವಾಹನ ( ಒಟ್ಟು 27 ವಾಹನಗಳು) ಜಪ್ತುಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಒಟ್ಟು ಮೌಲ್ಯ ರೂ. 22 ಲಕ್ಷ.ಗಳು ಆಗುತ್ತದೆ.
ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಪೊಲೀಸ್
ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸಾನಿಟೈಜರ್ನ್ನು ಹಂಚಿಕೆ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ