Latest

25 ಲಕ್ಷ ಸಂಬಳಕ್ಕೆ ಪತ್ನಿಯಾಗಲು ನಟಿಗೆ ಆಫರ್ ಕೊಟ್ಟಿದ್ದ ಉದ್ಯಮಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಉದ್ಯಮಿಯೊಬ್ಬ ತಮಗೆ ತಿಂಗಳಿಗೆ 25 ಲಕ್ಷ ರೂ. ಸಂಬಳದ ಆಧಾರದಲ್ಲಿ ಪತ್ನಿಯಾಗಲು ಆಫರ್ ನೀಡಿದ್ದ ಎಂದು ನಟಿ ನೀತು ಚಂದ್ರ ಹೇಳಿಕೊಂಡಿದ್ದಾರೆ.

ಬಾಲಿವುಡ್ ಹಂಗಾಮಾದೊಂದಿಗೆ ತಮ್ಮ ಕಥೆ ಹೇಳಿಕೊಂಡ ನೀತು ಚಂದ್ರ “ನನ್ನದು ಒಬ್ಬ ಯಶಸ್ವಿ ನಟಿಯ ವೈಫಲ್ಯದಿಂದ ಕೂಡಿದ ಕಥೆಯಾಗಿದೆ” ಎಂದು ಹೇಳಿದ್ದಾರೆ.

Home add -Advt

13 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ನಟರೊಂದಿಗೆ, ಹೈಬಜೆಟ್ ಚಿತ್ರಗಳಲ್ಲಿ ನಟಿಸಿದ ತಮಗೆ ಇಂದು ಕೆಲಸವಿಲ್ಲ, ಆದಾಯವೂ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಾಲಿವುಡ್ ನ ‘ಗರಂ ಮಸಾಲಾ’, ‘ಒನ್ ಟೂ ಥ್ರೀ’, ‘ಟ್ರಾಫಿಕ್ ಸಿಗ್ನಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನೀತು ಚಂದ್ರ ನಟಿಸಿದ್ದಾರೆ.

ಕಾರು-ಆಟೋ ಮುಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ದುರ್ಮರಣ

 

Related Articles

Back to top button