10 ದಿನಗಳಿಂದ ಊಟವಿಲ್ಲದೇ ಪರದಾಡುತ್ತಿದ್ದ ಕಾರ್ಮಿಕರ ರಕ್ಷಣೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ದೇಶಾದ್ಯಂತ ಲಾಕ್​ಡೌನ್​ ಜಾರಿಯಾಗಿರುವುದರಿಂದ ಕೂಲಿ ಕಾರ್ಮಿಕರ, ದಿನಗೂಲಿ ನೌಕಾರರ ಸ್ಥಿತಿ ಶೋಚನೀಯಾವಾಗಿದೆ. ಈ ನಡುವೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕಳೆದ ಹತ್ತು ದಿಗಳಿಂದ ಅನ್ನ, ನೀರು ಸಿಗದೇ ಪರದಾಡುತ್ತಿದ್ದ ಬಾಣಂತಿ, ಮಕ್ಕಳು ಸೇರಿದಂತೆ ಹಲವು ಕೂಲಿ ಕಾರ್ಮಿಕರನ್ನು ಜಿಲ್ಲಾಡಳಿತ ರಕ್ಷಿಸಿದೆ.

ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರಿನಲ್ಲಿ ಸುಮಾಅರು 22 ಕಾರ್ಮಿಕರು ಊಟವಿಲ್ಲದೇ, ತಮ್ಮ ಊರಿಗೂ ತೆರಳು ಆಗದೇ ಗೋಣಿ ಚೀಲ ಹಾಸಿಕೊಂಡು ಬದುಕುತ್ತಿದ್ದರು. ಪೊಲೀಸರಿಗೆ ಸಿಕ್ಕಿದ ಇವರಿಗೆ ಈಗಾ ಜಿಲ್ಲಾಡಳಿತ ಆಶ್ರಯ ನೀಡಿದೆ.

ಕಾಫಿ ಎಸ್ಟೇಟ್ ಮಾಲೀಕ ಈ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಲಾಕ್​ಡೌನ್​ ಜಾರಿಗೆ ಬಂತೆಂದು ಎಸ್ಟೇಟ್​​ನಿಂದ ಹೊರಹಾಕಿದ್ದಾರೆ. ಬಾಣಂತಿ ಸೇರಿ 6 ಪುಟ್ಟ ಮಕ್ಕಳು ಒಟ್ಟು 22 ಕೂಲಿ ಕಾರ್ಮಿಕರು ಬೀದಿಪಾಲಾಗಿ ಕಣ್ಣೀರು ಹಾಕುತ್ತಿದ್ದರು.

ಸುಮಾರು 22 ವಲಸಿಗ ಕಾರ್ಮಿಕರು ಚೆಕ್​ಪೋಸ್ಟ್​​ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬೀಳುವ ಭಯದಿಂದ ಚೀಲದೊಳಗೆ ಅವಿತುಕೊಂಡಿದ್ದರು. ಈ ಕೂಲಿ ಕಾರ್ಮಿಕರು ಹಗರಿಬೊಮ್ಮನಹಳ್ಳಿಯಿಂದ ವಲಸೆ ಬಂದಿದ್ದರು ಎಂದು ತಿಳಿದು ಬಂದಿದೆ. ಸಧ್ಯ ಜಿಲ್ಲಾಡಳಿತ ಇವರಿಗೆ ಆಶ್ರಯ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button