Kannada NewsKarnataka NewsLatest

ಕೋರೋನಾ ಸೋಂಕು ಶುದ್ದಿಕರಣ ಘಟಕ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ –  ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಇಂಗಳಿ, ಯಡೂರ, ಚಂದೂರ, ಕಲ್ಲೋಳ, ಕೆರೂರ ಹಾಗೂ ಕಾಡಾಪೂರ ಈ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಮಾಹಾ ಮಾರಕ ರೋಗವಾದ ಕೊರೋನಾ ವೈರಸ್ ನಿಯಂತ್ರಣದ ಬಗ್ಗೆ ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕರಾದ  ಮಹಾಂತೇಶ ಕವಟಗಿಮಠರವರು ಇಂದು ಸಭೆ ನಡೆಸಿದರು.
ಮಾಂಜರಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಎಮ್.ಸಿದ್ದಪ್ಪಾ ಗ್ರಾಮದಲ್ಲಿ ವೈರಸ್ ಹರಡದಂತೆ ಕೈಗೊಂಡ ಕ್ರಮಗಳ ಕುರಿತು ವಿವರ ಒದಗಿಸಿದರು.

ಪ್ರಧಾನ ಮಂತ್ರಿಗಳು ಮತ್ತು  ಮುಖ್ಯಮಂತ್ರಿಗಳು ಈಗಾಗಲೆ ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವ ಮತ್ತು ಪ್ರತ್ಯೇಕತೆಯನ್ನು ಅಳವಡಿಸಿಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ವಿನಂತಿಸಿದಂತೆ ಜನಸಾಮಾನ್ಯರಿಗೆ ಅಧಿಕಾರಗಳು ಅರಿವು ಮೂಡಿಸಬೇಕೆಂದು  ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಗ್ರಾಮದ ಮುಖಂಡರಿಗೆ ಸೂಚಿಸಿದರು.

ಈ ವೇಳೆ ಗ್ರಾಮಪಂಚಾಯತ ಎಲ್ಲ ಸದಸ್ಯರು, ಗ್ರಾಮದ ಮುಖಂಡರು, ತಹಶಿಲ್ದಾರರಾದ ಸುಭಾಷ ಸಂಪಗಾವಿ, ಕಂದಾಯ ಇಲಾಖೆಯ ಕೋಲಕಾರ, ಕೃಷಿ ಸಹಾಯಕ ನಿರ್ದೇಶಕ ಜನಮಟ್ಟಿ, ತಾಲೂಕಾ ಪಂಚಾಯತ ಮ್ಯಾನೇಜರ  ಶಿವಾನಂದ ಶಿರಗಾಂವೆ, ಆಹಾರ ನಿರೀಕ್ಷರು, ಗ್ರಾ.ಪಂ. ಅಧ್ಯಕ್ಷ ಮಾಯಾ ಭಿಲವಡೆ, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ, ಬಬನ ಭಿಲವಡೆ, ಉಪಾಧ್ಯಕ್ಷ ಶೀತಲ ಮಗೆಣ್ಣವರ, ಅಣ್ಣಾಸಾಹೆಬ ಯಾದವ, ಶೀತಲ ಯಾದವ, ಮಹೇಶ ದಾಬೋಳೆ, ಸಿದ್ದಾರ್ಥ ಗಾಯಾಗೋಳ, ಸಿಕಂದರ ತಾಂಬೋಳಿ, ಶ್ರೀಧರ ಭೋಜಕರ, ದಾದಾಸೋ ಭೋಜಕರ, ಮೋಹನ ಲೋಕರೆ, ಸನತಕುಮಾರ ಪಾಟೀಲ, ಶಶಿಕಾಂತ ಪಾಟೋಳೆ, ದತ್ತ ಸಲ್ಲರೆ ಕಾರ್ಖಾನೆಯ ನಿರ್ದೆಶಕ ಅಮರ ಯಾದವ, ಗ್ರಾಮ ಲೆಕ್ಕಾಧಿಕಾರಿಗಳಾದ ಮನೋಜ ಕಾಂಬಳೆ ಹಾಗೂ ಇನ್ನುಳಿದ ಸರಕಾರಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಿಬ್ಬಂದಿ ಹಾಜರಿದ್ದರು.

ಇದೆ ವೇಳೆ ಮಾಂಜರಿ ಗ್ರಾಮಸ್ಥರ ವತಿಯಿಂದ ನಿರ್ಮಿಸಲಾದ ಕೋರೋನಾ ಸೋಂಕು ನಿಯಂತ್ರಣಾ ಶುದ್ದಿಕರಣ ಘಟಕವನ್ನು ಮಹಾಂತೇಶ ಕವಟಗಿಮಠ ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗ್ಗೆಣ್ಣವರ ಇವರ ಹಸ್ತದಿಂದ ಉದ್ಘಾಟಿಸಲಾಯಿತು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button