ರಾಜ್ಯದ ಜನತೆ ನಿದ್ದೆಗೆಡಿಸಿದ ಬಾವಲಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈಗಾಗಲೇ ಕೊರೊನಾ ವೈರಾಸ್ ವಿಶ್ವಾದ್ಯಂತ ಹರಡಿದ್ದು, ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಬಾವಲಿಗಳಿಂದಲೂ ಕೊರೊನಾ ವೈರಸ್ ಹೆಚ್ಚುತ್ತದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ.

ಹೌದು. ಬಾವಲಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರೋದು ಮತ್ತಷ್ಟು ಭೀತಿ ಸೃಷ್ಟಿಸಿದೆ. ಕರ್ನಾಟಕ ಸೇರಿ 9 ರಾಜ್ಯಗಳ ಬಾವಲಿಗಳನ್ನ ಐಸಿಎಂಆರ್ ಸಂಶೊಧನೆಗೊಳಪಡಿಸಿತ್ತು. ಈ ವೇಳೆ ಕೊರೊನಾ ಸೋಂಕು ಬಾವಲಿಗಳಲ್ಲಿ ಕಂಡು ಬಂದಿದ್ದು, ಈ ಕುರಿತು ಸಂಶೋಧಕರ ಮಾಹಿತಿಯನ್ನು ಐಸಿಎಂಆರ್ ಜನರಲ್ ಆಫ್ ಮೆಡಿಕಲ್ ರಿಸರ್ಚ್ ನ ಮೊದಲ ಅಧ್ಯಾಯದಲ್ಲಿ ಪ್ರಕಟಿಸಿದೆ.

ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಎರಡು ರೀತಿಯ ಬಾವಲಿ ಕೊರೊನಾ ವೈರಸ್‌ ಕಂಡುಬಂದಿವೆ ಎಂದು ಅಧ್ಯಯನ ಹೇಳಿದೆ. ಆದರೆ, ಈ ಬಾವಲಿಗಳು ಮಾನವನಿಗೆ ರೋಗ ತರುವುದಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ವಿಜ್ಞಾನಿ ಡಾ.ಪ್ರಜ್ಞಾ ಡಿ ಯಾದವ್‌ ಹೇಳಿದ್ದಾರೆ.

ಬಾವಲಿಗಳನ್ನು ಬಹಳಷ್ಟು ವೈರಸ್‌ಗಳ ಮೂಲಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ಕೆಲವು ಮನುಷ್ಯರಲ್ಲಿಯೂ ಕಾಣಿಸಿಕೊಂಡಿವೆ. ಹಿಂದೆ ನಿಫಾ ವೈರಸ್‌ ಕೂಡ ಮನುಷ್ಯರಲ್ಲಿ ಕಾಣಿಸಿಕೊಂಡಿತ್ತು. ಈಗ ಎದ್ದಿರುವ ಕೊರೊನಾ ವೈರಸ್‌ ಕೂಡ ಬಾವಲಿಗಳಿಂದಲೇ ಹರಡಿದೆ ಎಂಬ ಶಂಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಯನ ಹೇಳಿದೆ.

ಇನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಹೇರಳವಾಗಿ ಬಾವಲಿಗಳು ಇದ್ದು ಇದರಿಂದ ಕೊರೊನಾ ವೈರಸ್ ಸೋಂಕು ಹರಡಬಹುದೇ ಎಂಬ ಆತಂಕ ಜನರಲ್ಲಿ ಶುರುವಾಗಿದೆ. ಒಟ್ಟಾರೆ ಬಾವಲಿಗಳಿಂದ ಕೊರೊನಾ ವೈರಸ್ ಹರಡುತ್ತದೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಭೀತಿ ನಡುವೆ ಬಾವಲಿಗಳು ಕೂಡ ಈಗ ರಾಜ್ಯದ ಜನತೆ ನಿದ್ದೆಗೆಡಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button