ಪ್ರಗತಿವಾಹಿನಿ ಸುದ್ದಿ; ರಾಮನಗರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಮಿ ಪುತ್ರ, ನಟ, ರಾಜಕಾರಣಿ ನಿಖಿಲ್ ಕುಮಾರ್ ಹಾಗೂ ರೇವತಿ ವಿವಾಹ ರಾಮನಗರದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸರಳವಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.
ರಾಮನಗರದ ಜಾನಪದ ಕಲಾಲೋಕದ ಬಳಿ ಅದ್ದೂರಿಯಾಗಿ ನಡೆಸಲು ಉದ್ದೇಶಿಸಿದ್ದ ನಿಖಿಲ್ ವಿವಾಹವನ್ನು, ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ತುಂಬಾ ಸರಳವಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಂದು ನೆರವೇರಿಸಲಾಯಿತು. ಆದಾಗ್ಯೂ ವಿವಾಹಕ್ಕೆ ಜನರು ಸೇರಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಕೊರೊನ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಕ್ ಡೌನ್ ಘೋಷಣೆಯಾಗಿದ್ದರೂ ಕೂಡ ಮಾಜಿ ಸಿಎಂ ಕುಮಾರಸ್ವಾಮಿಯವರು, ಬೆಂಗಳೂರಿನಿಂದ ಕೇತಗಾನಹಳ್ಳಿಗೆ ತೆರಳಿ ಯಾವುದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ, ಮುಖಕ್ಕೆ ಮಾಸ್ಕ್ ಕೂಡಾ ಧರಿಸದೇ ಮಗನ ವಿವಾಹ ನಡೆಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಎರಡು ಕುಟುಂಬ ಸದಸ್ಯರು ಮಾತ್ರ ನಿಖಿಲ್-ರೇವತಿ ಮದುವೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದರೂ ಕೂಡ 200ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ. ಲಾಕ್ ಡೌನ್ ಇರುವುದರಿಂದ ಯಾವುದೇ ಮದುವೆ, ಸಭೆ, ಸಮಾರಂಭಗಳನ್ನು ಮಾಡುವಂತಿಲ್ಲ, 20ಕ್ಕೂ ಹೆಚ್ಚು ಜನರು ಸೇರಬಾರದು ಎಂದು ಕೇಂದ್ರ ಗೃಹ ಇಲಾಖೆ ಕೊಟ್ಟಿರುವ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ. ಹೀಗಿದ್ದರೂ ಹಲವು ಜನರು ಸೇರಿರುವುದು ಲಾಕ್ ಡೌನ್ ನಿಯಮಾವಳಿ ಉಲ್ಲಂಘನೆಗೆ ಕಾರಣವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚು ಕೊರೊನಾ ಸೋಂಕು ಹರಡುತ್ತಿದ್ದು, ಬೆಂಗಳೂರನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ. ಇನ್ನು ರಾಮನಗರದಲ್ಲಿ ಯವುದೇ ಕೊರೊನಾ ಸೋಂಕು ಪತ್ತೆಯಾಗದಿರುವ ಕಾರಣ ಗ್ರೀನ್ ಝೋನ್ ಎಂದು ಘೋಷಿಸಲಾಗಿದೆ. ಆದರೆ ನಿಖಿಲ್ ವಿವಾಹ ಹಿನ್ನಲೆಯಲ್ಲಿ 48 ವಾಹನಗಳಿಗೆ ಅನುಮತಿ ಪಡೆದು ಬೆಂಗಳೂರಿನಿಂದ ಕೇತಗಾನಹಳ್ಳಿಗೆ ಜನರನ್ನು ಕರೆದುಕೊಂಡು ಹೋಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ