Kannada NewsKarnataka NewsLatest

ರಾತ್ರೋರಾತ್ರಿ ಬದಲಾಯಿತು ಸಂಕೇಶ್ವರದ ಚಿತ್ರಣ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ;  ತಾಲೂಕಿನ ಸಂಕೇಶ್ವರ ಪಟ್ಟಣದ ವ್ಯಕ್ತಿಯೊಬ್ಬರಿಗೆ ಗುರುವಾರ ಕಿಲ್ಲರ್ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಇಡೀ ಪಟ್ಟಣ ಸೀಲ್‌ಡೌನ್‌ ಆಗಿರುವುದರಿಂದ ಜನರು ಭಯದಲ್ಲಿ ಕಾಲಕಳೆಯುವಂತಾಗಿದೆ.
ಮನೆಯಿಂದ ಜನರು ಹೊರಗೆ ಬರದಂತೆ ಮುಜಾಗ್ರತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ಅವರು ವಿಶೇಷ ತುಕಡಿ ಹಾಗೂ ಹೋಮ್ ಗಾರ್ಡ ಹೆಚ್ಚಿನ ಸಿಬಂದಿಯನ್ನು ನೇಮಕಮಾಡಿಕೊಂಡಿದ್ದಾರೆ.
ಪುರಸಭೆ ಅಧಿಕಾರಿ ಜಗದೀಶ ಇಟ್ಟಿ ಅವರು ಸಾರ್ವಜನಿಕರಿಗೆ ದಿನ ನಿತ್ಯ ಸಾಮಗ್ರಿಗಳ ಕೊರೆತೆಯಾಗದಂತೆ ಸ್ವಯಂ ಸೇವಕರಿಂದ ಪೇಪರ್, ಹಾಲು, ತರಕಾರಿ ಸಾಮಗ್ರಿಗಳ ಪೂರೈಕೆ ಮಾಡಿದ್ದಾರೆ.
ಆರೋಗ್ಯ ಅಧಿಕಾರಿ ಉದಯ ಕುಡಚಿ ಅವರು ಮುಂಜಾನೆ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರ ಸಭೆ ಕರೆದು ಪ್ರತಿ ಮನೆಗೆ ತೆರಳಿ ಮಧುವೇಹ, ಬಿಪಿ, ಇನ್ನಿತರ ಕಾಯಲೆಗಳಿರುವ ಸದಸ್ಯರ ಆರೋಗ್ಯದ ಕುರಿತು ಮಾಹಿತಿ ಕಲೆಹಾಕಿ ವರದಿ ನಿಡಬೇಕೆಂದು ಸೂಚಿಸಿದ್ದಾರೆ.
ಪಟ್ಟಣದಲ್ಲಿ ವೈಕ್ತಿಗೆ ಕೊರೊನಾ ವೈರಸ್ಸ್ ಸೋಂಕು ದೃಢಪಟ್ಟಿದ್ದರಿಂದ ಇಂದು ಮುಂಜಾನೆ ಕೆಲವು ಕಿರಾಣಿ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದರು. ಬಸ್ ನಿಲ್ದಾಣ, ಹಳ್ಳೆ ಪಿಬಿ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮನೆಗಳ ಬಾಗಿಲು ಕಿಡಕಿ ಮುಚ್ಚಿದ್ದವು. ಪಟ್ಟಣದಲ್ಲಿ ಜನರಿಲ್ಲದೇ ಭಯಾನಕ ವಾತಾವರಣ ನಿರ್ಮಾಣವಾಗಿದೆ.
ಪೋಲಿಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯರ್ತರಿಗೆ ನೀರು ಅಹಾರ ಇಲ್ಲದೆ ಪರದಾಡುವಂತಾಯಿತು, ಅಹಾರವಿಲ್ಲದೆ ಮೂಕಪ್ರಾಣಿಗಳು ಕೂಡ ನರಳಾಡುವಂತಾಗಿದೆ.
ಆರೋಗ್ಯ ಇಲಾಖೆ, ಆಶಾ ಕಾರ್ಯರ್ತೆಯರು, ಅಂಗನವಾಡಿ ಕಾರ್ಯರ್ತೆಯರಿಗೆ ಸರಕಾರಿ ಆಸ್ಪತ್ರೆಯಿಂದ ಸೆನಿಟೈಜರ್, ಮಾಸ್ಕ್ , ಹ್ಯಾಡ್ ಗ್ಲೌಜ್ ಹಾಗೂ ಸೇಪ್ಟಿ ಬಟ್ಟೆ ವಿತರಿಸಿದರು.
ಕೊರೊನಾ ವೈರಸ್ಸ್ ತಡೆಗಟ್ಟುವ ಕೆಲಸದಲ್ಲಿ ತೊಡಗಿರುವ ಪೋಲಿಸ್, ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳಿಗೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ದಾನಿಗಳು ನೀರು, ಅಹಾರ ನೀಡಬೇಕೆಂದು ಅಧಿಕಾರಿಗಳ ಮನವಿಯಾಗಿದೆ.
ಪಟ್ಟಣಕ್ಕೆ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರು ಆಗಮಿಸಿ  ಅಧಿಕಾರಿಗಳ ಸಭೆ ಕರೆದು ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ.

 

ಸಂಕೇಶ್ವರ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರುವುದರಿಂದ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ, ಸಾರ್ವಜನಿಕರು ಮನೆಯಿಂದ ಹೊರಗಡೆ ಬರಬೇಡಿ. ರೋಗ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಸಹಕಾರ ನೀಡಿ. ನಿಮ್ಮ ಜೀವದ ಜೊತೆ ಮತ್ತೊಬ್ಬರ ಜೀವ ಉಳಿಸಿ.
-ಶಾಸಕ ಉಮೇಶ ಕತ್ತಿ

 

ಸಂಕೇಶ್ವರ ಪಟ್ಟಣಕ್ಕೆ ಬೇರೆ ಪಟ್ಟಣ ಹಾಗೂ ಗ್ರಾಮಗಳಿಂದ ಜನರು ಬರದಂತೆ ೩ ಕಿಮೀ ಬ್ಯಾರಿಕೇಡ್ ಹಾಕಿ ಸೂಕ್ತ ಬಂಧೋಬಸ್ತ್ ಕಲ್ಪಿಸಲಾಗಿದೆ. ಸಾರ್ವಜನಿಕರ ಮನೆಯಲ್ಲಿದ್ದು ಆಧಿಕಾರಿಗಳಿಗೆ ಸಹಕಾರ ನೀಡಬೇಕು.
-ಗುರುರಾಜ ಕಲ್ಯಾಣಶೆಟ್ಟಿ ಸಿಪಿಐ ಹುಕ್ಕೇರಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button