Kannada NewsKarnataka NewsLatest

ಆನ್‌ಲೈನ್ ಮೂಲಕ ಅತ್ಯವಶ್ಯಕ ಸಾಮಗ್ರಿ ಮಾರಾಟ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನಿಪ್ಪಾಣಿ ನಗರಸಭೆಯಲ್ಲಿ ಆನ್‌ಲೈನ್ ಮಾರುಕಟ್ಟೆ ಮೂಲಕ ಅತ್ಯವಶ್ಯಕ ಸಾಮಗ್ರಿ ಪಡೆದುಕೊಳ್ಳುವ ಸೇವೆಯನ್ನು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು.

 ನಿಪ್ಪಾಣಿ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಭಾರತೀಯ ವಿಚಾರ ಮಂಚ, ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆನ್‌ಲೈನ್ ಮಾರುಕಟ್ಟೆ ಮೂಲಕ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಮನೆ ಬಾಗಿಲಿಗೆ ಉಚಿತ ಸೇವಾ ಕಾರ್ಯಕ್ರಮನ್ನು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ  ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಶಶಿಕಲಾ ಜೊಲ್ಲೆ, ಕೋವಿಡ್ -೧೯ ರೋಗವನ್ನು ತಡೆಗಟ್ಟಲು ಏಕೈಕ ಮಾರ್ಗೊಪಾಯವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆ ರೆಡ್‌ಝೋನ್ ಅಂತಾ ಗುರುತಿಸಲಾಗಿದ್ದು ಈ ಕುರಿತಂತೆ ರೋಗ ಹರಡುವಿಕೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಎಲ್ಲಾ ಮಾರ್ಗೋಪಾಯಗಳನ್ನು ಕಟ್ಟೆಚ್ಚರದಿಂದ ಪಾಲಿಸಬೇಕಾಗಿದೆ.

ಹೀಗಾಗಿ ಸಾವಿರಾರು ಜನರು ಅಂಗಡಿಗಳಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾಮಗ್ರಿ ಖರೀದಿಸುವುದನ್ನು ದಿನ ಪ್ರತಿ ನಾವು ನೋಡುತ್ತಿದ್ದೇವೆ. ಅಧಿಕಾರಿಗಳ ಕಾರ್ಯದಕ್ಷತೆಯಿಂದ ಹಾಗೂ ಸಾರ್ವಜನಿಕ ಸಹಕಾರದಿಂದ ಈವರೆಗೂ ಕೊರೋನಾ ರೋಗದ ಹರಡುವಿಕೆ ನಿಪ್ಪಾಣಿ ನಗರದಲ್ಲಿ ಕಂಡು ಬಂದಿಲ್ಲ. ಇಂತಹ ಪರಿಸ್ಥಿಯಲ್ಲಿ ಆನ್‌ಲೈನ್ ಮಾರುಕಟ್ಟೆ ಮೂಲಕ ಸ್ವಯಂ ಸೇವಕರ ಸಹಾಯದಿಂದ ಅಂಗಡಿಕಾರರಿಂದ ನೇರವಾಗಿ ಗ್ರಾಹಕರ ಮನೆಗೆ ತಲುಪುವುದರಿಂದ ಅಷ್ಟು ಗ್ರಾಹಕರು  ಅಂಗಡಿಗಳಿಗೆ ಬಂದು ರೋಗದ ಹರಡುವಿಕೆಯನ್ನು ತಡೆಯಲು ಈ ತಂತ್ರಾಂಶ ಮಹತ್ವದಾಗಿದೆ ಎಂದು ತಿಳಿಸಿದರು.

ಲೋಕಸಭಾ ಸದಸ್ಯರಾದ ಅಣ್ಣಾಸಾಹೇಬ ಜೊಲ್ಲೆ ಮಾತನಾಡುತ್ತಾ, ಕೊವಿಡ್ ೧೯ ಹರಡದಂತೆ ನಗರಸಭೆ ನಿಪ್ಪಾಣಿ ಭಾರತೀಯ ವಿಚಾರ ಮಂಚ ಪೂಟ್‌ಬಾಲ್ ಅಸೋಸಿಯನ್ ಹಸಿರು ಸೇನೆ, ಮಹಾವೀರ ಆರೋಗ್ಯ ಸಂಸ್ಥೆ ಫುಡ್ ಫಾರ್ ನೀಡಿ ಹೀಗೆ ಹಲವಾರು ಸಂಘ ಸಂಸ್ಥೆಗಳು ಹಾಗೂ ನಗರದ ಗಣ್ಯರು ಹಾಗೂ ದಯಾ ಪರ ಜನತೆ ವೈಯಕ್ತಿಕವಾಗಿ ಹಸಿದವರಿಗೆ, ಅನ್ನ ನೀಡುವ ಪ್ರಮಾಣಿಕವಾಗಿ ನಿರಂತರ ಪ್ರಯತ್ನವನ್ನು ಮಾಡಿರುತ್ತಾರೆ. ಲೋಕಸಭಾ ಸದಸ್ಯನಾಗಿ ನಾನು ಎಲ್ಲಾ ಪರೋಕ್ಷ ಹಾಗೂ ಅಪರೊಕ್ಷವಾಗಿ ಇಂತಹ ಸಂಕಷ್ಟ ಪರಸ್ಥಿಯನ್ನು ಎದುರಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೂ ಈಗಾಗಲೇ ನಗರಸಭೆ ನಿಪ್ಪಾಣಿ ವಿವಿಧ ಸಂಘಟನೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಪದ್ದತಿ ಅನುಷ್ಠಾನ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಸಹ ನಿಪ್ಪಾಣಿ ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ಹಾಗೂ ಕೋವಿಡ್ ರೋಗವನ್ನು ತಪ್ಪಿಯೂ ಬಾರದಂತೆ ನೋಡಿಕೊಳ್ಳಲು ಎಲ್ಲರೂ ಶ್ರಮಪಡಬೇಕಾಗಿ ಕರೆ ನೀಡುತ್ತೇನೆ ಎಂದು ತಿಳಿಸಿದರು

ಇದೇ ಕಾಲಕ್ಕೆ ಆನ್‌ಲೈನ ತಂತ್ರಾಂಶ ಮಾಹಿತಿ ನೀಡುತ್ತಾ ಬಾಬಾಸಾಹೇಬ ಸಂಜಯ ರಾಮನಕಟ್ಟಿ ಗೂಗಲ್ ಪ್ಲೇಸ್ಟೋರ್‌ದಿಂದ ಆಫ್ Farmship ಡೌನಲೋಡ್ ಮಾಡಿಕೊಂಡ ನಂತರ ತಮಗೆ ಬೇಕಾಗುವ ಅತ್ಯಾವಶ್ಯಕ ವಸ್ತುಗಳನ್ನು ಸ್ಟೋರ್ ಗಳ ಮುಖಾಂತರ ಆಯ್ಕೆ ಮಾಡಿ, ಸಾಮಗ್ರಿಗಳಿಗೆ ನಿಗದಿಪಡಿಸಿದ ದರವನ್ನು ಪರಿಶೀಲಿಸಿ ತಮಗೆ ಬೇಕಾದ ಅಂಗಡಿಗಳಿಂದ ಸಾಮಗ್ರಿ ಆದೇಶವನ್ನು ನೀಡಿ ತಮ್ಮ ವಿಳಾಸದೊಂದಿಗೆ ಸೇವೆಯನ್ನು ಪಡೆದು ಹಣ ಸಂದಾಯ ಮಾಡಬಹುದಾಗಿದೆ ಎಂದು ವಿವರಿಸಿದರು.

ಪ್ರಸ್ತಾವಿಕವಾಗಿ ಮಾತನಾಡುತ್ತಾ ಪೌರಾಯುಕ್ತ  ಮಹಾವೀರ ಬೋರಣ್ಣವರ, ಸಾರ್ವಜನಿಕರಿಂದ ಈವರೆಗೆ ರೋಗ ಹರಡದಂತೆ ಉತ್ತಮ ಪ್ರತ್ತಕ್ರಿಯೆ ಇದ್ದು ಕೆಲವು ಜನರು ಅನಾವಶ್ಯಕವಾಗಿ ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳಿಂದ ನಗರ ಮಧ್ಯ ಭಾಗದಲ್ಲಿ ಬಂದು ಹೋಗುತ್ತಿದ್ದು ಅಂತಹ ವಾಹನ ಸವಾರರು ನಗರದ ಎಲ್ಲರ ಆರೋಗ್ಯ ದೃಷ್ಟಿಕೊನದಿಂದ ಅತ್ಯಾವಶ್ಯಕವಾದಲ್ಲಿ ಮಾತ್ರ ಹೊರಗೆ ಬರಬೇಕು. ಏಕೆಂದರೆ ಸಮೀಪದ ತಾಲ್ಲೂಕುಗಳಲ್ಲಿ ಈಗಾಗಲೇ ಕೊರೋನಾ ರೋಗವು ತನ್ನ ಖಾತೆಯನ್ನು ತೆರೆದುಕೊಂಡಿದೆ. ದಯವಿಟ್ಟು ಸಾರ್ವಜನಿಕರು ಯಾವುದೇ ಕಾರಣಕ್ಕೂ ಒಂದು ರೋಗ ಪ್ರಕರಣ ಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಭಾರತೀಯ ವಿಚಾರ ಮಂಚ್ ನ ಶೈಲೆಂದ್ರ ಪಾರಿಕ  ಮಾತನಾಡುತ್ತಾ, ನಗರದಲ್ಲಿ ಉತ್ತಮ ಪದ್ದತಿಯನ್ನು ಅಳವಡಿಸಲು ನಗರಸಭೆ ನಿಪ್ಪಾಣಿ ಅತ್ಯತ್ತುವಾಗಿ ಸ್ಪಂದಿಸುತ್ತಿದ್ದು ಇದರಿಂದ ರೋಗ ತಡೆಗಟ್ಟಲು ತುಂಬಾ ಅನುಕೂಲಕರವಾಗಿದೆ. ಈಗಾಗಲೇ ಸ್ಯಾನೇಟರಿ ಕ್ಯಾಬೇನ್ ಆನ್‌ಲೈನ್ ಗ್ರಾಹಕ ಸೇವಾ ಕೇಂದ್ರ ಹಾಗೂ ಮುಂಬರುವ ದಿನಗಳಲ್ಲಿ ಸೆನಿಟೈಸರ್ ಮೂಲಕ ಕೈ ತೊಳೆದುಕೊಳ್ಳಲು ವಾಶ್ ಬೇಸಿನ್ ರೋಬೋಟ್ ಮೂಲಕ ಔಷಧೋಪಚಾರ, ದ್ವೀ ಚಕ್ರ ವಾಹನದ ಮೂಲಕ ಕ್ರಿಮಿನಾಶಕ ಸಿಂಪಡಣೆ ಇತ್ಯಾದಿ ಕಾರ್ಯಕ್ರಮಗಳ ಅನುಷ್ಠಾನ ಮಾಡಬೇಕಾಗಿರುತ್ತದೆ. ಅದೇ ರೀತಿ ಇನ್ನು ಮುಂದೆ ಸಹ ಇನ್ನೂ ಹೆಚ್ಚಿನ ಸಹಕಾರವನ್ನು ಅಪೆಕ್ಷಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ ಪ್ರಕಾಶ ಗಾಯಕವಾಡ, ನಗರಸಭೆ ಪೌರಯುಕ್ತರಾದ ಮಹಾವೀರ ಬೋರನ್ನವರ, ಚಂದ್ರಕಾಂತ ಕೋಟಿವಾಲೆ, ಶೈಲೆಂದ್ರ ಪಾರಿಕ, ಪ್ರಣವ ಮಾನವಿ, ವಿಭಾವರಿ ಖಾಂಡಕೆ, ಸುರೇಶ ಸೇಟ್ಟಿ, ದೀಲಿಪ ಚವ್ವಾಣ, ರಾಜು ಗುಂದೇಶಾ, ವಿನಾಯಕ ವಡೆ, ನಗರಸಭೆ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button