ಕಾರ್ಮಿಕರಿಗೆ ಉಚಿತ ಬಸ್ ಕಲ್ಪಿಸಲು ಕೆಪಿಸಿಸಿಯಿಂದ ಕೆಎಸ್ ಆರ್ ಟಿಸಿಗೆ 1 ಕೋಟಿ ದೇಣಿಗೆ  

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಲಸೆ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ಕೆಎಸ್‌ಆರ್‌ಟಿಸಿಗೆ 1 ಕೋಟಿ ರೂ. ದೇಣಿಗೆ ನೀಡಲಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಆಗಮಿಸಿದ ಕಾರ್ಮಿಕರ ಸಂಕಷ್ಟ ಆಲಿಸಿದ ಕೆ ಪಿಸಿಸಿ ಅಧ್ಯಕ್ಷ ದೀ.ಕೆ ಶಿವಾಕುಮಾರ್, ಕಾರ್ಮಿಕರಿಗೆ  ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು  ಕೆಪಿಸಿಸಿಯಿಂದ 1 ಕೋಟಿ ರೂ ಚೆಕ್ ಅನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರಿಗೆ ನೀಡಿದರು.

ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಕಾರ್ಮಿಕರನ್ನು ಸುರಕ್ಷಿತಾವಾಗಿ ಊರುಗಳಿಗೆ ತಲುಪಿಸಲು ಅನುಕೂಲವಾಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಮಾಜಿ ಸಚಿವರು ಸೇರಿದಂತೆ ಹಲವರು ಕೊರೊನಾ ಕಾಂಗ್ರೆಸ್ ಪರಿಹಾರದ ನಿಧಿಗೆ ನೀಡಿದ ಹಣದಲ್ಲಿ  1 ಕೋಟಿ ರೂ.ನ್ನು ಕೆಎಸ್ ಆರ್ ಟಿಸಿಗೆ ನೀಡಿದ್ದೇವೆ. ಹಲವು ಸಂಘ-ಸಂಸ್ಥೆಗಳು ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ಬಸ್ ಗಳಲ್ಲಿ ತೆರಳುವವರು ಊಟವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದರು.

ಇನ್ನು ಹೆಚ್ಚಿನ ಹಣದ ಅಗತ್ಯವಿದ್ದರೂ ನೀಡಲು ಕೆಪಿಸಿಸಿ ಸಿದ್ಧವಿದೆ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಸಂದರ್ಭದಲ್ಲಿ ಪ್ರಯಾಣಿಕರಿಂದ ನಯಾಪೈಸೆ ತೆಗೆದುಕೊಳ್ಳದೇ ಅವರನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ. ಸರ್ಕಾರವೂ ಅವರಿಗೆ ಸಹಾಯಮಾಡಲಿ, ನಾವು ನೆರವು ನೀಡುತ್ತೇವೆ ಎಲ್ಲರೂ ಒಟ್ಟಾಗಿ ಬಡ ಕಾರ್ಮಿಕರಿಗೆ ಸಾಹಾಯ ಮಾಡೋಣ. ಕೇವಲ ಮೂರು ದಿನ ಮಾತ್ರವಲ್ಲ, 6 ದಿನ ಬೇಕಾದರೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button