ಬಾಗಲಕೋಟೆಯಲ್ಲಿ ಹೆಚ್ಚಿದ ಕೊರೊನಾ ಸೋಂಕು: ಜಿಲ್ಲೆ ಗಡಿ ಭಾಗದ ರಸ್ತೆ ಸಂಪರ್ಕ ಬಂದ್

ಪ್ರಗತಿವಾಹಿನಿ ಸುದ್ದಿ; ಗದಗ: ಬಾಗಲಕೋಟೆಯ ಡಾಣಕಶಿರೂರನಲ್ಲಿ ಗರ್ಭಿಣಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಸೋಂಕಿತರ ಸಂಖ್ಯೆ 13ಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಗಡಿ ಭಾಗದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಮಾಡಲಾಗಿದೆ.

ರೋಣ ತಾಲೂಕಿನ ಹುನಗುಂಡಿ ಗ್ರಾಮಕ್ಕೆ ಯಾರೂ ಬರದಂತೆ ರಸ್ತೆ ಮಧ್ಯೆ ಗುಂಡಿ ತೆಗೆದು ಗ್ರಾಮಕ್ಕೆ ದಿಗ್ಭಂಧನ ಹಾಕಲಾಗಿದೆ. ಬದಾಮಿ ತಾಲೂಕಿನ ಡಾಣಕಶಿರೂರ ಗ್ರಾಮ ಹಾಗೂ ಗದಗ ಜಿಲ್ಲೆ ಹುನಗುಂಡಿ ಗ್ರಾಮಕ್ಕೆ ಕೇವಲ 5 ಕಿಲೋಮೀಟರ್ ಅಂತರವಿದೆ. ಆದ್ದರಿಂದ ಜನರ ಒಡನಾಟ ಹೆಚ್ಚಿದ್ದರಿಂದ ರಸ್ತೆನ್ನು ಬಂದ್ ಮಾಡಲಾಗಿದೆ.

ಈ ಕಾರಣದಿಂದ ಈ ಕೊರೊನಾ ಸಂದರ್ಭದಲ್ಲಿ ಬದಾಮಿ ತಾಲೂಕಿನ ಜನರು ಬರದಂತೆ ಜಿಲ್ಲೆಯ ಹುನಗುಂಡಿ ಸಂಪರ್ಕಿಸುವ ಬಸರಕೋಡ, ಹೊಳೆಆಲೂರ, ನೈನಾಪೂರ, ಮಾಡಲಗೇರಿ ಸಂಪರ್ಕಿಸುವ ರಸ್ತೆ ಬಂದ್ ಮಾಡಲಾಗಿದೆ. ಬದಾಮಿ ತಾಲೂಕಿನ ಜನರು ಊರಿನ ಒಳಗೆ ಬರದಂತೆ, ಜೊತೆಗೆ ಈ ಹುನಗುಂಡಿ ಗ್ರಾಮಸ್ಥರು ಬದಾಮಿ ತಾಲೂಕಿಗೆ ಹೋಗದಂತೆ ನಿರ್ಬಂಧ ಹೇರಿದ್ದಾರೆ.

Home add -Advt

Related Articles

Back to top button