ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದಿಂದ ಜನರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕು ಮೋದಗಾ ಗ್ರಾಮದ ಬಡವರಿಗೆ ಮೋದಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಸ್ವಂತ ಖರ್ಚಿನಿಂದ ದಿನಸಿಗಳನ್ನು ವಿತರಿಸಿದ್ದಾರೆ.
ಗ್ರಾಮದ ಸುಮಾರು 885 ಬಿಪಿಎಲ್ ಕಾರ್ಡ್ ದಾರರಿಗೆ ಎಣ್ಣೆ, ಉಪ್ಪು, ಬಿಸ್ಕಿಟ್ ಮತ್ತಿತರ ಸಾಮಗ್ರಿಗಳನ್ನು ವಿತರಿಸಿ ಅವರ ಕಷ್ಟಕ್ಕೆ ನೆರವಾಗುವ ಪ್ರಯತ್ನ ಮಾಡಿದ್ದಾರೆ. ವಿಶೇಷವೆಂದರೆ ಸಹಕಾರ ಸಂಘದ ಹಣ ಬಳಸದೆ ನಿರ್ದೇಶಕರು ತಾವೇ ಸ್ವಂತ ಹಣ ಹಾಕಿ ಮೋದಗಾ ಗ್ರಾಮದ ಜನರ ಸಹಾಯಕ್ಕೆ ನಿಂತಿದ್ದಾರೆ.
ಸಂಘದ ಅಧ್ಯಕ್ಷ ಗಂಗಣ್ಣ ಕ್ಲಲೂರು, ನಿರ್ದೇಶಕರಾದ ಚನ್ನರಾಜ ಹಟ್ಟಿಹೊಳಿ, ರುದ್ರಗೌಡ ಪಾಟೀಲ, ಅಶೋಕ ಮಾರಿಹಾಳ, ನಿಂಗಪ್ಪ ಮುಗಳಿ, ವಿಠ್ಠಲ ಹಣಬರ, ಸಹದೇವ ಹೆಗಡೆ ನೇತೃತ್ವದಲ್ಲಿ ಸಾಮಗ್ರಿಗಳ ವಿತರಣೆ ನಡೆಯಿತು.
ಸಂಘದ ಪದಾಧಿಕಾರಿಗಳ ಕಳಕಳಿಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿ, ಕಷ್ಟದ ಸಮಯದಲ್ಲಿ ನೆರವಿಗೆ ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ