ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ಅಟ್ಟಹಾಸ ದಿನ ದಿನಕ್ಕೂ ಹೆಚ್ಚುತ್ತಿದ್ದು, ಜನರು ಭಯ-ಭೀತಿಯಲ್ಲೇ ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನಲೆಯಲ್ಲಿ ನವರಸನಾಯಕ ಜಗ್ಗೇಶ್ ಕೊರೊನಾ ಬಂದಮೇಲೆ ಸಮಾಜ ಹಾಗೂ ಜನರ ಜೀವನ ಶೈಲಿ ಮೇಲೆ ಯಾವೆಲ್ಲ ಪರಿಣಾಮಗಳನ್ನು ಬೀರಿದೆ ಎಂಬ ಬಗ್ಗೆ ಕವನವೊಂದನ್ನು ಬರೆದಿದ್ದಾರೆ.
ಹಾಸ್ಯದ ಜತೆಗೆ ಕೊರೊನಾದಿಂದಾಗಿ ವಾಸ್ತವ ಪರಿಸ್ಥಿತಿಯನ್ನು ತಮ್ಮದೇ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕವನ ಭಾರಿ ಮೆಚ್ಚುಗೆ ಪಡೆಯುತ್ತಿದೆ.
ಮನುಷ್ಯ ಸಂಬಂಧವಿಲ್ಲದ ದಿನ!
ಬಯಸಿದರು ಸಿಗರು ಜನ!
ಬೆಂಗಾಡಂತೆ ಕಾಣುವ ರಸ್ತೆ!
ಹತ್ತಿರಬರದಂತೆ ಆಗಿದೆ ವ್ಯವಸ್ಥೆ!
ಒಡನಾಟ ಇಲ್ಲದೆ ಒಬ್ಬಂಟಿ!
ಬದುಕಿಗಿಲ್ಲಾ ಗ್ಯಾರಂಟಿ!
ಮನೆಮುಂದೆ ಲೆಕ್ಕಕ್ಕೆ ಕಾರು!
ಬೀಗ ಜಡೆದು ಕುಂತೈತೆ ಬಾರು!
ಆಗುತ್ತಿತ್ತು ವಾರವೆಲ್ಲಾ ಪಾರ್ಟಿ!
ಈಗ ಹೋದ್ರೆ ಅಡ್ಡ ಬರುತ್ತೆ ಲಾಠಿ!
ಅಂದು ದುಡ್ಡಿದ್ದವ ದೊಡ್ಡಪ್ಪ!
ಈಗ ಸ್ವಲ್ಪ ಕಾಸಿದ್ರೆ ಸಾಲ ಕೊಡಪ್ಪ!
ಒಂದೇ ಮುಖ ಒಂದೇ ಮನೆ!
ಯಾವಾಗ ಇದಕ್ಕೆ ಕೊನೆ!
ನಾನು ನಾನು ಅಂತಿದ್ರು ಎಲ್ಲಾ!
ದೇವ್ರು ಇಟ್ಟ ಬಾಯಿಗೆ ಕಹಿ ಬೆಲ್ಲಾ!
ಹುಟ್ಟಿದ್ರು ಗೆದ್ರು ಸತ್ರು ಮನೆಮುಂದೆ ಕೇಕು!
ಈಗ ಸುಮ್ನಿದ್ರು ಮನೆಮುಂದೆ ಸ್ಮೋಕು!
ಯಾರ್ ಕಂಡ್ರು ಹೆದರೋಣ!
ಇಲ್ಲಾಂದ್ರೆ ಗುಮ್ಮುತ್ತೆ ಕೊರೊನಾ!
ನಿದ್ರೆ ಬರದೆ ಕುಂತಿದ್ದೆ!
ಅದಕ್ಕೆ ಹಿಂಗೆ ಗೀಚಿದ್ದೆ!
ಶುಭರಾತ್ರಿ ಸುಮ್ಮನೆ ನಕ್ಕು ಮಲಗಿಬಿಡಿ!
ಬೆಳಿಗ್ಗೆ ಎದ್ರು ಯಾವ್ ಕೆಲ್ಸನು ಇಲ್ಲಾಬುಡಿ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ