ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ – ಸಾರ್ವಜನಿಕರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದದಿಂದ ಘಟಪ್ರಭಾ ಬಲದಂಡೆ ಕಾಲುವೆ ಮೂಲಕ ಚಿಕ್ಕೋಡಿ ಉಪಕಾಲುವೆಗೆ ಕೊಟಬಾಗಿ ಏತ ನೀರಾವರಿಗೆ ಇಂದು ಸಂಜೆಯಿಂದ ಮುಂದಿನ 9 ದಿನಗಳವರೆಗೆ ನೀರು ಹರಿಸಲಾಗುತ್ತಿದೆ ಎಂದು ಶಾಸಕ ಉಮೇಶ ಕತ್ತಿ ತಿಳಿಸಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ ಬುಧವಾರ ಸಂಜೆ ಆರು ಗಂಟೆಯಿಂದ ಘಟಪ್ರಭಾ ಬಲದಂಡೆ 2 ಟಿಎಂಸಿ ಸಿಬಿಸಿ ಕಾಲುವೆ ಕೊಟಬಾಗಿ ಏತ ನೀರಾವರಿ ಯೋಜನೆಗೆ 2556 ಕ್ಯೂಸೆಕ್ಸ್ ನೀರು ಬಿಡಲಾಗುತ್ತದೆ”, ಎಂದು ಹೇಳಿದ್ದಾರೆ.
ಮೇ 13ರಿಂದ 22 ರ ವರೆಗೆ ಒಟ್ಟು 9 ದಿನಗಳವರೆಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್ಸ್ನಂತೆ ಎರಡು ಟಿಎಂಸಿ ನೀರು ಮತ್ತು ದಿನಾಲೂ 550 ಕ್ಯೂಸೆಕ್ಸ್ ನಂತೆ 10 ದಿನಗಳ ವರೆಗೆ ನೀರು ಹರಿಸಲು ಈಗಾಗಲೇ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಉದ್ಬವವಾಗಬಾರದು ಎನ್ನುವ ಉದ್ದೇಶದಿಂದ ನೀರು ಹರಿಸಲಾಗಿದ್ದು, ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕತ್ತಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ