Latest

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗ್ಗೆ ಹೆಲ್ತ್  ಬುಲಿಟಿನ್ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತ ಬಂದಿದೆ ಎಂದು ದಕ್ಷಿಣ ವಲಯ ಡಿಸಿಪಿ ರೋಹಿಣಿಕಟೋಚ್ ಸೆಪಟ್ ತಿಳಿಸಿದ್ದಾರೆ.

ಮುತ್ತಪ್ಪ ರೈ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮೂಲತಃ ಪುತ್ತೂರಿನವರಾದ ಮುತ್ತಪ್ಪ ರೈ ಒದು ಕಾಲದಲ್ಲಿ ಭೂಗತ ಜಗತ್ತನ್ನು ಆಳಿದ್ದರು. ಅವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ನಂತರದಲ್ಲಿ ಭೂಗತ ಜಗತ್ತಿನಿಂದ ಹಿಂದೆ ಸರಿದು ಜೈ ಕರ್ನಾಟಕ ಎನ್ನುವ ಸಂಘಟನೆ ಹುಟ್ಟು ಹಾಕಿದ್ದರು.

Home add -Advt

ಅವರ ಪತ್ನಿ ರೇಖಾ 2013ರಲ್ಲಿ ಸಿಂಗಾಪುರದಲ್ಲಿ ಮೃತಪಟ್ಟಿದ್ದಾರೆ. 2018ರಲ್ಲಿ ಮುತ್ತಪ್ಪ ರೈಗೆ ಕ್ಯಾನ್ಸ್ ಇರುವುದು ಗೊತ್ತಾಗಿದೆ.

ಸಾವಿರಾರು ಕೋಟಿ ರೂ. ಆಸ್ತಿ ಹೊಂದಿರುವ ಅವರು ಅನೇಕರಿಗೆ ವಿಲ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

 

Related Articles

Back to top button