ಪ್ರಗತಿವಾಹಿನಿ ಸುದ್ದಿ; ಜಿನೀವಾ: ವಿಶ್ವಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೊನಾ ವೈರಸ್ ಎಂದಿಗೂ ನಿರ್ಮೂಲನೆಯಾಗುವುದಿಲ್ಲ. ಇದು ಈಗಾಗಲೇ ಉಳಿದಿರುವ ವೈರಸ್ ಗಳ ರೀತಿ ಇದು ಮತ್ತೊಂದು ವೈರಸ್ ಆಗಿ ಉಳಿಯಲಿದೆ. ಹಾಗಾಗಿ ಅದರೊಂದಿಗೆ ಬದುಕಲು ಕಲಿಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
ಕೊರೊನಾ ವೈರಸ್ ಎಂದಿಗೂ ಸಂಪೂರ್ಣವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ. ಕಳೆದ ವರ್ಷ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಆರಂಭವಾದ ವೈರಸ್ ಈಗಾಗಲೇ 4.2 ದಶಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಹಾಗೆಯೇ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಮಾನವ ರಾಶಿಗೆ ಹೊಸ ವೈರಸ್ ಪ್ರವೇಶಿಸಿದೆ. ಆದ್ದರಿಂದ ಸಾಂಕ್ರಾಮಿಕ ರೋಗದ ವಿರುದ್ಧ ಯಾವಾಗ ಮೇಲುಗೈ ಸಾಧಿಸುತ್ತೇವೆ ಎಂದು ಭವಿಷ್ಯ ನುಡಿಯುವುದು ತುಂಬಾನೇ ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ನಿರ್ದೇಶಕ ಮೈಕಲ್ ರೈನ್ ಹೇಳಿದ್ದಾರೆ.
ಈ ವೈರಸ್ ನಮ್ಮ ಸಮಾಜದಲ್ಲಿ ಮತ್ತೊಂದು ಸಾಂಕ್ರಾಮಿಕ ವೈರಸ್ ಆಗಿ ಉಳಿಯಬಹುದು. ಹೆಚ್‌ಐವಿ ಇದುವರೆಗೆ ಹೋಗಿಲ್ಲ ಅದರಂತೆ ಇದು ಕೂಡ ಇರಲಿದೆ ಎಂದು ತಿಳಿಸಿದ್ದಾರೆ.
ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡುವುದರಿಂದ ಎರಡನೇ ಹಂತದ ಸೋಂಕು ಹರಡುವ ಸಾಧ್ಯತೆಯಿದೆ. ಅಲ್ಲದೆ ಸಾಧ್ಯವಾದಷ್ಟು ಗರಿಷ್ಠ ಮಟ್ಟದ ಎಚ್ಚರಿಕೆ ಕಾಪಾಡುವಂತೆ ದೇಶಗಳಿಗೆ ಶಿಫಾರಸು ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ