Kannada NewsKarnataka NewsLatest

ಬೆಳಗಾವಿಯಲ್ಲಿ ದಿನಕ್ಕೆ ಎಷ್ಟು ಕೊರೋನಾ ಸ್ಯಾಂಪಲ್ ಟೆಸ್ಟ್ ಆಗುತ್ತದೆ? ಇಲ್ಲಿದೆ ಪೂರ್ಣ ಮಾಹಿತಿ

ಪ್ರಗತಿವಾಹಿನಿಗೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಮಾಹಿತಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮಹಾಮಾರಿ ರಾಜ್ಯಕ್ಕೆ ಅಪ್ಪಳಿಸಿ ಹೆಚ್ಚು ಕಡಿಮೆ 2 ತಿಂಗಳಾಗುತ್ತ ಬಂದಿದೆ. ಈವರೆಗೆ ರಾಜ್ಯದಲ್ಲಿ 987 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರಲ್ಲಿ 35 ಜನರು ಸಾವಿಗೀಡಾದ ರೆ 460 ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ.

ಆರಂಭದಲ್ಲಿ ರಾಜ್ಯದಲ್ಲಿ ಕೆಲವೇ ಕೆಲವು ಕೊರೋನಾ ಟೆಸ್ಟಿಂಗ್ ಲ್ಯಾಬ್ ಇತ್ತು. ಉತ್ತರ ಕರ್ನಾಟಕದಲ್ಲಿ ಯವುದೇ ಟೆಸ್ಟಿಂಗ್ ಲ್ಯಾಬ್ ಇರಲಿಲ್ಲ. ಹಾಗಾಗಿ ಬೆಳಗಾವಿ ಸೇರಿದಂತೆ ಈ ಭಾಗದ ಸ್ಯಾಂಪಲ್ ಗಳನ್ನು ಶಿವಮೊಗ್ಗಕ್ಕೆ ಕಳಿಸಿ ಟೆಸ್ಟ್ ಮಾಡಲಾಗುತ್ತಿತ್ತು. ಇದು ಸಮಯ ಮತ್ತು ಆರ್ಥಿಕ ವೆಚ್ಚಕ್ಕೆ ಕಾರಣವಾಗುತ್ತಿತ್ತು.

ಇದೀಗ ಬೆಳಗಾವಿಯಲ್ಲೇ ಟೆಸ್ಟಿಂಗ್ ಆರಭವಾಗಿದೆ. ಇಲ್ಲಿಯ ಐಸಿಎಂಆರ್ ನಲ್ಲಿ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಇತರ ಜನಪ್ರತಿನಿಧಿಗಳು ಟೆಸ್ಟಿಂಗ್ ಲ್ಯಾಬ್ ಗೆ ಚಾಲನೆ ನೀಡಿದರು.

ಇದೀಗ ಬೆಳಗಾವಿಯಲ್ಲಿಯೇ ಇಲ್ಲಿಯ ಸ್ಯಾಂಪಲ್ ಗಳನ್ನು ಟೆಸ್ಟ್ ಮಾಡಲಾಗುತ್ತಿದೆ. ಐಸಿಎಂಆರ್ ನಲ್ಲಿ ಒಮ್ಮೆ 90ರಂತೆ ದಿನಕ್ಕೆ 2 ಬ್ಯಾಚ್ ನಲ್ಲಿ ಪ್ರತಿನಿತ್ಯ 180 ಸ್ಯಾಂಪಲ್ ಗಳನ್ನು ಟೆಸ್ಟ್ ಮಾಡಲಾಗುತ್ತಿದೆ. ಇದರಿಂದಾಗಿ ಸಾಮಾನ್ಯವಾಗಿ ಪ್ರತಿ ದಿನದ ಸ್ಯಾಂಪಲ್ ಗಳು ಅಂದಂದೇ ಟೆಸ್ಟಿಂಗ್ ಆಗುತ್ತಿದೆ.

ಈ ಕುರಿತು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ. ಒಮ್ಮೊಮ್ಮೆ ಬಹಳ ಪ್ರಕರಣ ಬಂದಾಗ ಪ್ರಾಥಮಿಕ ಮತ್ತು ಎರಡನೆ ಹಂತದ ಸಂಪರ್ಕಿತರ ಸಂಖ್ಯೆ ಹೆಚ್ಚಿದ್ದಾಗ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಸ್ಯಾಂಪಲ್ ಇರುತ್ತದೆ. ಇಲ್ಲವಾದಲ್ಲಿ 180ಕ್ಕಿಂತ ಹೆಚ್ಚು ಇರುವುದಿಲ್ಲ. ಹಾಗಾಗಿ ಅಂದಂದಿನ ಸ್ಯಾಂಪಲ್ ಅಂದಂದೇ ಪರೀಕ್ಷೆಗೊಳಪಡುತ್ತದೆ.

ಸಧ್ಯ 100 ಸ್ಯಾಂಪಲ್ ಗಳ ಫಲಿತಾಂಶ ಮಾತ್ರ ಬರುವುದು ಬಾಕಿ ಇದೆ. ಅದು ನಾಳೆ ಬರಲಿದೆ. ಆದರೆ ನಾಳೆ ಎಷ್ಟು ಸ್ಯಾಂಪಲ್ ಗಳನ್ನು ಕಳಿಸಬೇಕಾಗುತ್ತದೆ ಎನ್ನುವುದನ್ನು ನೋಡಬೇಕು ಎಂದು ಅವರು ತಿಳಿಸಿದರು.

ಬೆಳಗಾವಿ ನಗರದಲ್ಲಿ ಇಂದು ಸದಾಶಿವ ನಗರ  ಹೊಸದಾಗಿ ಕಂಟೈನ್ಮೆಂಟ್ ಏರಿಯಾ ಆಗಿದೆ. ಇದನ್ನು ಬಿಟ್ಟರೆ ಇದೇ 17ರಂದು ನಗರದ ಉಳಿದೆಲ್ಲ ಕಂಟೈನ್ಮೆಂಟ್ ಪ್ರದೇಶಗಳೂ ಡಿ ನೋಟಿಫೈ ಆಗುತ್ತವೆ. ನಗರ ಸಂಪೂರ್ಣ ಸೀಲ್ ಡೌನ್ ನಿಂದ ಮುಕ್ತವಾಗುತ್ತವೆ. ಸದಾಶಿವನಗರ ಇನ್ನೂ 28 ದಿನ ಸೀಲ್ ಡೌನ್ ಆಗಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

 

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ, ಬೆಲ್ ಐಕಾನ್ ಒತ್ತಿ ಸಬ್ ಸ್ಕ್ರೈಬ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button