Kannada NewsKarnataka NewsLatest

 ಕಠಿಣ ಕಾನೂನು ಜಾರಿಗೊಳಿಸಲು ಸರ್ಕಾರ ಚಿಂತನೆ -ರಮೇಶ ಜಾರಕಿಹೊಳಿ

ಬೆಳಗಾವಿ ಭಾಗದಲ್ಲಿ ನಕಲಿ ಮದ್ಯದ ಹಾವಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಬೆಳಗಾವಿ ಭಾಗದಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದ್ದು ಇದನ್ನು ಕಠಿಣ ಕಾನೂನು ಕ್ರಮದ‌ ಮೂಲಕ ಹತ್ತಿಕ್ಕಲಾಗುವುದು ಎಂದು ಜಲಸಂಪನ್ಮೂಲ ಸಚಿವ  ರಮೇಶ್ ಜಾರಕಿಹೊಳಿ‌ ಹೇಳಿದರು.
ಇಂದು ಗೋಕಾಕ್ ನಗರದಲ್ಲಿ ಫಲಾನುಭವಿ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು ಮದ್ಯಪಾನ ನಿಷೇಧದ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರವೇ ಅಂತಿಮ ಎಂದರು.
ಈಗಾಗಲೇ ಗುಜರಾತ್ ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದೆ ಆದರೆ ಅದು ಯಶಸ್ವಿಯಾಗಿಲ್ಲ. ಆದರೆ ಮದ್ಯಪಾನ ನಿಷೇಧದಿಂದ ನಕಲಿ ಮದ್ಯದ ಹಾವಳಿ ಹೆಚ್ಚಾಗುವ ಆತಂಕವಿದೆ. ಹೀಗಾಗಿ ಈ ಕುರಿತು ಕಠಿಣ ಕಾನೂನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು.
ಮದ್ಯ ನಿಷೇಧ ಮಾಡಬೇಕು ಎಂದು ಈಗಾಗಲೇ ಹಲವಾರು ಮಠಾಧಿಶರು ಮತ್ತು ಜನರು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಕಠಿಣವಾದ ಕಾನೂನು ಜಾರಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಮೇ.೧೭ ರ ಬಳಿಕ ಲಾಕ್‌ಡೌನ್ ಸಡಿಲಿಕೆಯಾಗುವ ಸಂಭವವಿದೆ. ಆದರೂ ಜನ ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವಿಸುವುದನ್ನು ರೂಢಿಸಿಕೊಳ್ಳಬೇಕು  ಎಂದು ಕರೆನೀಡಿದ ಸಚಿವರು ಅವರು ಪಂಚಾಯಿತಿ ಚುನಾವಣೆ ನಡೆಸುವುದರ ಬಗ್ಗೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button