Kannada NewsKarnataka NewsLatest

11 ವರ್ಷದ ನಂತರ ಬಾಕಿ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ,  ಉಗರಗೋಳ(ತಾ.ಸವದತ್ತಿ) –  ಆದಿಶಕ್ತಿ ಶ್ರೀರೇಣುಕಾ ಸನ್ನಿಧಿಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ, ಪ್ರವಾಸೋದ್ಯಮ ಅಭಿವೃದ್ದಿಗೂ ಒತ್ತು ನಿಡಿದ್ದೇವೆ ಎಂದು  ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ೨.೭೯ ಕೋಟಿ ರೂ ವೆಚ್ಚದಲ್ಲಿ ಯಲ್ಲಮ್ಮ ದೇವಸ್ಥಾನ ಪ್ರವೇಶ ದ್ವಾರದಿಂದ ಎಣ್ಣೆ ಹೊಂಡದವರೆಗೆ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಗದಿತ ಕಾಲ ಮಿತಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಭಕ್ತರು ಬಿಸಿಲಲ್ಲಿ ನಿಂತು ಪರದಾಡುವುದಕ್ಕೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದರು.

೨೦೦೯ ರಲ್ಲಿ ನಾನು ಮೊದಲ ಸಲ ಶಾಸಕನಾಗಿದ್ದಾಗ ಭಕ್ತರಿಗಾಗಿ ನೆರಳಿನ ವೈವಸ್ಥೆ ಕಲ್ಪಿಸುವ ಕಾಮಗಾರಿಗೆ ಬಿಜೆಪಿ ಸರ್ಕಾರ ೩ ಕೋಟಿ ರೂ ಅನುದಾನ ಬಿಡುಗಡೆಗೊಳಿಸಿತ್ತು, ಈ ಪೈಕಿ ೧ ಕೋಟಿ ರೂ ಮೊತ್ತದಲ್ಲಿ ಆಯ್ದ ಕಾಮಗಾರಿ ನಡೆದಿತ್ತು, ವಿವಿಧ ಕಾರಣಗಳಿಂದ ಉಳಿದ ಕಾಮಗಾರಿ ಸ್ಥಗಿತವಾಗಿ ಅನುದಾನ ಬಳಿಕೆಯಾಗದೆ ಉಳದಿತ್ತು, ಈಗ ೧೧ ವರ್ಷಗಳ ನಂತರ ಮತ್ತೆ ೨.೭೯ ಕೋಟಿ ರೂ ವೆಚ್ಚದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದ ಅವರು ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದಲ್ಲಿ ಭಕ್ತರಿಗೆ ಯಾವುದೆ ಕೊರೆತೆಗಳು ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಉಗರಗೋಳ ಗ್ರಾಮ ಪಂಚಾಯತ ಅಧ್ಯಕ್ಷ ಕೃಷ್ಟಪ್ಪ ಲಮಾಣಿ, ಸವದತ್ತಿ ಎಪಿಎಮ್‌ಸಿ ಅಧ್ಯಕ್ಷ ಜಗದೀಶ ಹನಶಿ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಬಾಬು ಕಾಳೆ, ತಾಪಂ ಸದಸ್ಯ ಪ್ರಕಾಶ ಲಮಾಣಿ, ಶಿವಾನಂದ ಪಟ್ಟಣಶೇಟ್ಟಿ, ದೇವಸ್ಥಾನ ಅಭಿಯಂತರ ಎಮ್ ವ್ಹಿ ಮೂಳ್ಳೂರ, ಕಿರಿಯ ಅಭಿಯಂತರ ಡಿ ಆರ್ ಚವ್ಹಾಣ, ವಿರುಪಾಕ್ಷ ಹನಶಿ, ಬಸವರಾಜ ಶಿದ್ದಕ್ಕನವರ, ವಾಯ್ ವಾಯ್ ಕಾಳಪ್ಪನವರ, ಗೀರಿಶ ಸಕಪ್ಪನವರ, ಶರೀಪಸಾಬ ಬಾರಿಗಿಡದ, ಉಮೇಶ ಹಾದಿಮನಿ, ಸವದತ್ತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್ ಎ ಕದ್ರಾಂಪೂರ, ಸಹಾಯಕ ಇಂಜನಿಯರ್ ಬಸವರಾಜ ಎಸ್, ಶಮೀರ ಶಿರಗುಪ್ಪಿ, ಬಸವರಾಜ ಪರವಿನಾಯ್ಕರ, ಶಿವು ಸಂಗಳದ, ಪರಸನಗೌಡ ಪಾಟೀಲ, ಪ್ರಲ್ಹಾದ ಚಪ್ಪರಮನಿ, ವಿಠಲ ಗುಡೆನ್ನವರ, ಮಂಜು ಗುಡೆನ್ನವರ, ಅಲ್ಲಮಪ್ರಭು ಪ್ರಭುನವರ, ಪಂಡಿತ ಯಡೂರಯ್ಯ, ಉಗರಗೋಳ ಗ್ರಾಂ ಪಂಚಾಯತ ಹಾಗೂ ಯಲ್ಲಮ್ಮ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button