ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ಸುಮಾರು 1200 ಮನೆಗಳ ನೀರಿನ ಸಮಸ್ಯೆ ನಿವಾರಿಸಲು ಮುಂದಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಕೂಡಲೇ ಹೊಸದಾಗಿ ಬಾವಿ ಕೊರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾಲಕ್ಷ್ಮಿ ನಗರದ ಒಂದನೇಯ ಕ್ರಾಸ್ ನಿಂದ ಏಳನೇಯ ಕ್ರಾಸ್ ವ್ಯಾಪ್ತಿಯಲ್ಲಿ ಬರುವ ಒಟ್ಟು 868 ಮನೆಗಳಿಗೆ ಹಾಗೂ ಇದೇ ಗ್ರಾಮದ ಎಡಬ್ಲೂಎಚ್ ಆರ್ಮಿ ಕ್ವಾರ್ಟರ್ಸ್ ನ ಒಟ್ಟು 276 ಮನೆಗಳಿಗೆ ನೀರಿನ ತೊಂದರೆ ಇದೆ. ಇಲ್ಲಿಯ ಸಮಸ್ಯೆ ನಿವಾರಿಸಲು ಬೇರೆ ನೀರಿನ ಮೂಲ ಇಲ್ಲದಿರುವುದರಿಂದ ಕೂಡಲೇ ಹೊಸದಾಗಿ ಬಾವಿಯನ್ನು ಕೊರೆಯಬೇಕೆಂದು ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಮತ್ತು ನಿರ್ಮೂಲನೆಯ ಇಂಜಿನಿಯರ್ ಹಾಗೂ ಅಂತರ್ಜಲ ಇಲಾಖೆಯ ಜಿಯೋಲಾಜಿಸ್ಟ್ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ನಿವಾಸಿಗಳು ಸೇರಿ ಇಂದು ಅಂತರ್ಜಲದ ಕುರಿತಾಗಿ ಬಾವಿಯನ್ನು ಕೊರೆಯಲು ಯೋಗ್ಯವಾದ ಸ್ಥಳದ ಬಗ್ಗೆ ಪರಿಶೀಲನೆಯನ್ನು ನಡೆಸಿದರು.
ತಕ್ಷಣ ಜಾಗ ಅಂತಿಮಗೊಳಿಸಿ ಬಾವಿ ಕೊರೆಸಿ ಸ್ಥಳೀಯರ ನೀರಿನ ಸಮಸ್ಯೆಗೆ ಮುಕ್ತಿ ನೀಡುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ