ಪ್ರಗತಿವಾಹಿನಿ ಸುದ್ದಿ; ಕೊಲ್ಲಾಪುರ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕೊರೊನಾದಿಂದ ರಕ್ಷಣೆ ಪಡೆಯಲು ವಿವಿಧ ರೀತಿಯ ಮಾಸ್ಕ್ ಗಳು ಮಾರುಕಟ್ಟಗೆ ಬಂದಿವೆ. ಕೊಲ್ಲಾಪುರದಲ್ಲಿ ಬೆಳ್ಳಿ ಮಾಸ್ಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಕೊಲ್ಲಾಪುರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಬೆಳ್ಳಿ ಮಾಸ್ಕ್ ತಯಾರಿಸಿದ್ದು, ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ಸಿದ್ಧಪಡಿಸಿದ್ದಾಗಿ ತಿಳಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ವಧು-ವರರು ಧರಿಸಲು ಹಾಗೂ ನೂತನ ದಂಪತಿಗಳಿಗೆ ಉಡುಗೊರೆ ನೀಡಲು ಕೂಡ ಈ ಮಾಸ್ಕ್ ಗೆ ಭಾರಿ ಬೇಡಿಕೆ ಹೆಚ್ಚಿದೆ.
25 ಗ್ರಾಂ ತೂಕದಲ್ಲಿ ಅಂದರೆ 2,500 ರೂ.ಗಳಿಂದ 3 ಸಾವಿರ ರೂ.ಗಳಲ್ಲಿ ಈ ಮಾಸ್ಕ್ ಖರೀದಿಗೆ ಲಭ್ಯವಿದೆ. ಮಹರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಭಿನ್ನ ರೀತಿಯ ಮಾಸ್ಕ್‌ಗಳು ಲಭ್ಯವಾಗುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ