Latest

Shocking – ರಾಜ್ಯದಲ್ಲಿ ಇಂದು 116 ಜನರಿಗೆ ಕೊರೋನಾ ಸೋಂಕು ದೃಢ, ಬೆಳಗಾವಿಯಲ್ಲಿ 9 ಜನರಿಗೆ ಸೋಂಕು

ಉತ್ತರ ಕನ್ನಡದಲ್ಲಿ 9 ಜನರಿಗೆ ಸೋಂಕು

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 116 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ  1578ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 9, ಉತ್ತರ ಕನ್ನಡದಲ್ಲಿ  9, ಹಾಸನದಲ್ಲಿ  13 ,   ಉಡುಪಿಯಲ್ಲಿ 25, ದಕ್ಷಿಣ ಕನ್ನಡದಲ್ಲಿ  6, ಧಾರವಾಡದಲ್ಲಿ 5 ,  , ಬೆಂಗಳೂರಿನಲ್ಲಿ 6, ಬಳ್ಳಾರಿಯಲ್ಲಿ 11, ಶಿವಮೊಗ್ಗದಲ್ಲಿ 6, ಮಂಡ್ಯದಲ್ಲಿ 15 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇಂದು ಪ್ರಕಟವಾದ ಸೋಂಕಿತರ ಪಟ್ಟಿಯಲ್ಲಿ 75 ಜನರು ಮಹಾರಾಷ್ಟ್ರ ಸಂಪರ್ಕದವರೇ ಆಗಿದ್ದಾರೆ. ಹೆಚ್ಚಿನವರು ಕ್ವಾರಂಟೈನ್ ನಲ್ಲಿದ್ದವರೇ ಆಗಿದ್ದಾರೆ.

ಇನ್ನು ಇಂದು ಸಂಜೆ ಪುನಃ ಬಿಡುಗಡೆಯಾಗಲಿರುವ ಹೆಲ್ತ್ ಬುಲಿಟಿನ್ ಇನ್ನೆಷ್ಟು ಸಂಖ್ಯೆ ಹೊತ್ತು ತರಲಿದೆ ಎನ್ನುವ ಆತಂಕ ಉಂಟಾಗಿದೆ.

ಬೆಳಗಾವಿಯಲ್ಲಿ ಪತ್ತೆಯಾದವರಲ್ಲಿ ಮೂವರು ಜಾರ್ಖಂಡ್ ನಿಂದ , ಇಬ್ಬರು ಅಜ್ಮೀರ್ ನಿಂದ, ಮೂವರು ಕೊಲ್ಲಾಪುರದಿಂದ ಬಂದವರು.

ಶಿರಸಿಯಲ್ಲಿ ಪತ್ತೆಯಾಗಿರುವ ಎಲ್ಲ 9 ಜನರೂ ಮುಂಬೈ ನಂಟು ಹೊಂದಿರುವವರು.

————————–

ಪ್ರಗತಿವಾಹಿನಿಯ ಎಲ್ಲ ಸುದ್ದಿಗಳನ್ನು ಬೇರೆ ಬೇರೆ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಕಳಿಸಿ

————————–

ಪ್ರಗತಿವಾಹಿನಿ ಕಳೆದ ರಾತ್ರಿಯೇ ವರದಿ ಪ್ರಕಟಿಸಿತ್ತು – ಕೊರೋನಾ: ಶಿರಸಿಗೆ ಇಂದು ಬಿಗ್ ಶಾಕ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button