ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಮಹಿಳೆಯರನ್ನೂ ಮಿಲಿಟರಿ ಸೇವೆಗೆ ಸೇರಿಸಿಕೊಳ್ಳಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಐತಿಹಾಸಿಕ ನಿರಣಯ ತೆಗೆದುಕೊಂಡಿದ್ದಾರೆ.
ಸೈನ್ಯದ ಮಿಲಿಟರಿ ಪೊಲೀಸ್ ಗೆ ಮಹಿಳೆಯರನ್ನು ನೇಮಿಸಲು ನಿರ್ಮಲಾ ಒಪ್ಪಿಗೆ ಸೂಚಿಸಿದ್ದಾರೆ. ಶೇ. 20 ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಮಿಲಿಟರಿ ಪೊಲೀಸ್ ಸಿಬ್ಬಂದಿ ಭಾರತೀಯ ಸೇನೆಯ ಭಾಗವೇ ಆಗಿದ್ದು, ಇವರು ಸಂಚಾರ ವ್ಯವಸ್ಥೆ, ಮಿಲಿಟರಿ ಸಂಪರ್ಕ ವ್ಯವಸ್ಥೆ, ಯುದ್ಧ ಖೈದಿಗಳ ನಿರ್ವಹಣೆ, ವಿಚಾರಣೆ, ಸೇನೆಯ ಒಳಗೆ ವಿಐಪಿ ಭದ್ರತೆಗಳನ್ನು ನಿರ್ವಹಿಸುತ್ತಾರೆ.
ಇದೊಂದು ಕ್ರಾಂತಿಕಾರಿ ನಿರ್ಣಯ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಬಹು ವರ್ಷದ ಬೇಡಿಕೆ ಈಡೇರಿದಂತಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ