Latest

ವಿವಿಧೆಡೆ ವೇಮನರ ಜಯಂತಿ ಆಚರಣೆ

     ಪ್ರಗತಿವಾಹಿನಿ ಸುದ್ದಿ, ಮೂಡಲಗಿ 
ಇಲ್ಲಿಯ ತಾಲೂಕಾ ಆಡಳಿತದಿಂದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಹಾಯೋಗಿ ವೇಮನರ 607ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ತಾಲೂಕಾ ದಂಡಾಧಿಕಾರಿ ಮುರಳಿಧರ ತಳ್ಳಿಕೇರಿ ಅವರು ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ನಿರ್ದೇಶಕ ರವೀಂದ್ರ ಸೋನವಾಲ್ಕರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಜಯಾನಂದ ಪಾಟೀಲ, ಹಣಮಂತ ಗುಡ್ಲಮನಿ, ಮಾಜಿ ಸದಸ್ಯರಾದ ರಮೇಶ ಸಣ್ಣಕ್ಕಿ, ಅನ್ವರ ನಧಾಪ, ಸಚೀನ ಸೋನವಾಲ್ಕರ ಹಾಗೂ ಡಾ.ಎಸ್.ಎಸ್.ದಂಡಪ್ಪನ್ನವರ, ಪುಲಕೇಶ ಸೋನವಾಲ್ಕರ, ಕೆ.ಬಿ ಪಾಟೀಲ, ಕುಮಾರ ಗಿರಡ್ಡಿ, ಸಂಜಯ ಮೋಖಾಶಿ, ರಾಘವೇಂದ್ರ ಪಾಟೀಲ್, ಸುರೇಶ ಚಿಪ್ಪಲಕಟ್ಟಿ, ವೀರಣ್ಣಾ ಸೋನವಾಲ್ಕರ, ಉಪ ತಹಶಿಲ್ದಾರ ಎಲ್.ಎಚ್ ಭೋವಿ, ಗ್ರಾಮ ಲೆಕ್ಕಾಧಿಕಾರಿ ಬಾಗವಾನ ಉಪಸ್ಥಿತರಿದ್ದರು.

ಪುರಸಭೆಯಲ್ಲಿ:

ಇಲ್ಲಿಯ ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ಮಹಾಯೋಗಿ ವೇಮನರ ಜಯಂತಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಜಿ.ಆರ್ ಪೂಜಾರಿ ಅವರು ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಭಾರತಿ ಕೋಣಿ, ಸಿಂಬ್ಬಂದಿಗಳಾದ ಚಿದಾನಂದ ಮುಗಳಖೋಡ, ಸಿ.ಬಿ.ಪಾಟೀಲ್, ಪ್ರೀತಮ ಭೋವಿ, ಗೀತಾ ಬೋದಿಹಾಳ, ಎಸ್,ಎನ್ ಪಾಟೀಲ್ ಮತ್ತು ಹಣಮಂತ ಸತರಡ್ಡಿ ಉಪಸ್ಥಿತರಿದ್ದರು.

ಮುನ್ಯಾಳ ತೋಟ :

ಸಮೀಪದ ಮುನ್ಯಾಳ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವೇಮನರ ಜಯಂತಿಯ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ಸಿದ್ರಾಮ ಲೋಕನ್ನವರ ವೇಮನರ ಕುರಿತು ಮಾತನಾಡಿದರು.
ಶಿಕ್ಷಕ ಶಂಕರ ಗುಡಗುಡಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಸಹ ಶಿಕ್ಷಕ ಕೃಷ್ಣಮೂರ್ತಿ ಜೋಷಿ ವೇಮನರ ತತ್ವಗಳನ್ನು ವಿವರಿಸಿದರು. ಬಿ.ಬಿ. ಮಂಟೂರ, ಲಕ್ಷ್ಮೀ ಶಿವಾಪೂರ, ವಿದ್ಯಾ ಬೆಳಗಲಿ, ಜಯಶ್ರೀ ಮುಗಳಖೋಡ, ಪ್ರೀತಿ ಕಪ್ಪಲಗುದ್ದಿ ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button