Kannada News

ಹತ್ತಿರದಲ್ಲೇ ಇದ್ದರೂ ತಾಯಿಯ ಅಂತಿಮದರ್ಶನಕ್ಕೆ ಅವಕಾಶ ಸಿಗಲಿಲ್ಲ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಕ್ವಾರಂಟೈನ್‌ದಲ್ಲಿರುವ ವ್ಯಕ್ತಿಯ ತಾಯಿ (೭೦)  ಹೃದಯಾಘಾತದಿಂದ ಮೃಪಟ್ಟರೂ ಕೂಡ ಮುಖ್ಯದರ್ಶಕ್ಕೆ ಅವಕಾಶ ಮಾಡಿಕೂಡದ ತಾಲೂಕಾ ಆಡಳಿತದ ವಿರುದ್ದ ಮುಸ್ಲಿಂ ಸಮಾಜದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಮಾನವಿಯತೆ ಆಧಾರದ ಮೇಲೆ ಆತನ ಸ್ನೆಹಿತನ ಸಹಾಯದೊಂದಿಗೆ ಅಂತ್ಯಸಂಸ್ಕಾರ ಮಾಡುವ ಸಮಯದಲ್ಲಿ ಮೊಬೈಲ್ ವಿಡಿಯೋ ಕಾಲ್ ಮಾಡಿ ಮುಖ ದರ್ಶನ ಮಾಡಿಸಿದ್ದಾರೆ, ಇದೇ ಪಟ್ಟಣದಲ್ಲಿ ಮಗ ಇದ್ದರೂ ಕೂಡ ತನ್ನ ಹೆತ್ತತಾಯಿ ಮುಖನೋಡಿ ಅಂತ್ಯ ಸಂಸ್ಕಾರ ಮಾಡಲಾಗದ ಪರಿಸ್ಥಿತಿ ಬಂದಿರುವುದರಿಂದ ವ್ಯಕ್ತಿ ನೊಂದುಕೊಂಡು ದು:ಖಿತನಾಗಿದ್ದಾನೆ.
ಮುಜಾಗ್ರತೆಯಾಗಿ ಪುರಸಭೆ ಅಧಿಕಾರಿಗಳು ಮೃತವ್ಯಕ್ತಿಯ ಮನೆಯ ಹಾಗೂ ಅಕ್ಕಪಕ್ಕದಲ್ಲಿ ಮನೆಗಳಿಗೆ ಮತ್ತು ಅಂತ್ಯಸಂಸ್ಕಾರ ಮಾಡುವ ಸ್ಥಳದಲ್ಲಿ ಸ್ಯಾನಿಟೈಜರ್ ದ್ರಾವಣ ಸಿಂಪಡಿಸಿದ್ದಾರೆ.

ಘಟನೆ;- ಕಳೆದ ಮೇ ೨ರಂದು ತಾಲೂಕಿನ ಸಂಕೇಶ್ವರ ಹಾಗೂ ಹುಕ್ಕೇರಿ ಮತ್ತು ಗೋಟೂರ ಪ್ರವಾಸಿ ಮಂದಿರದಲ್ಲಿ ಅಡುಗೆ ಕೆಲಸಮಾಡುವರು ಅಜ್ಮೀರ ದರ್ಗಾಕ್ಕೆ ಹೋಗಿದ್ದರು. ಮರಳಿ  ಬರುವಾಗ ಕೊಗನೊಳ್ಳಿ ಚೆಕ್ಕಪೋಸ್ಟ ಹತ್ತಿರ ವಾಹನ ತಡೆದು ೩೦ ಜನರನ್ನು ಕ್ವಾರಂಟೈನ್ ಮಾಡಲಾಯಿತು. ಅದರಲ್ಲಿರುವ ೨೨ ಜನರಿಗೆ ಕೊರೊನಾ ಪಾಜಟೀವ್ ಸೊಂಕು ತಗಲಿರುವುದು ದೃಡಪಟ್ಟಿತು. ಇವರನ್ನು ಭೇಟ್ಟಿಯಾಗುವುದಕ್ಕೆ ಹೋಗಿರುವ ಪ್ರಥಮ ಹಂತವಾಗಿ ೫ ಜನರನ್ನು ಕ್ವಾರಂಟೈನ್ ಮಾಡಲಾಗಿದೆ, ಹೃದಯಾಘಾತದಿಂದ ಮೃತಟ್ಟಿರುವ ತಾಯಿಯ ಪುತ್ರನು ಇದ್ದಾನೆ. ಆದರೆ ಆತನಿಗೆ ಕೊರೊನಾ ಸೊಂಕಿನ ಯಾವುದೆ ಲಕ್ಷಣಗಳು ಕಂಡು ಬಂದಿರುವುದಿಲ್ಲಾ ಆದರೂ ತಾಲೂಕಾ ಆಡಳಿತ ಮುಜಗ್ರಾತಾ ಕ್ರಮವಾಗಿ ಈ ವ್ಯೆಕ್ಕಿಯನ್ನು ಕ್ವಾರಂಟೈನ್ ಮಾಡಿದ್ದಾರೆ.

ಕ್ವಾರಂಟೈನ್‌ದಲ್ಲಿರುವ ವ್ಯೆಕ್ತಿಯ ತಾಯಿ ಹೃದಯಾಘಾತದಿಂದ ಮೃಪಟ್ಟದ್ದಾರೆ, ಕೊರೊನಾ ಶಂಕಿತ ವ್ಯೆಕ್ತಿಗಳನ್ನು ಸರ್ಕಾರದ ನಿಯಮದಂತೆ ಹೊರಬಿಡುವುದಕ್ಕೆ ಅವಕಾಶವಿರುವುದಿಲ್ಲಾ ಆದರಿಂದ ಅನಿವಾರ್ಯವಾಗಿ ಆತನ ಸ್ನೆಹಿತನ ಮೊಬೈಲ್ ವಿಡಿಯೊ ಮೂಲಕ ತಾಯಿ ಮುಖ ತೋರಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ,
-ಮೊಹನ ಜಾಧವ, ಮುಖ್ಯಾಧಿಕಾರಿ, ಪುರಸಭೆ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button