ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ ದೇಶಾದ್ಯಂತ ಲಾಕ್ ಡೌನ್ 5.0 ಜಾರಿಗೆ ಬಂದಿದ್ದು, ಲಾಕ್ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಹಂತ ಹಂತವಾಗಿ ರೈಲು ಸಂಚಾರ ಆರಂಭವಾಗಿದೆ. ರಾಜ್ಯದೊಳಗೆ ಸಂಚರಿಸುವ ರೈಲುಗಳು ಈಗಾಗಲೇ ಆರಂಭವಾಗಿದ್ದು, 72 ದಿನಗಳ ಬಳಿಕ ಇಂದಿನಿಂದ ಅಂತರರಾಜ್ಯ ರೈಲುಗಳ ಸಂಚಾರ ಕೂಡ ಪ್ರಾರಂಭವಾಗಿದೆ.
ರಾಜ್ಯದಲ್ಲಿ 16 ವಿಶೇಷ ರೈಲುಗಳು ತಮ್ಮ ಸಂಚಾರ ಪ್ರಾರಂಭಿಸಲು ಸನ್ನದ್ಧವಾಗಿವೆ. ದೇಶಾದ್ಯಂತ ಒಟ್ಟು 200 ರೈಲುಗಳು ಸಂಚಾರ ಆರಂಭಿಸಿವೆ. ಸುಮಾರು ಒಂದೂವರೆ ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಲಿದ್ದು, ಈಗಾಗಲೇ ಜೂನ್ 30ರವರೆಗೆ 26 ಲಕ್ಷ ಟಿಕೆಟ್ ಬುಕಿಂಗ್ ಆಗಿದೆ.
ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯ. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕೂಡ ಕಡ್ಡಾಯ. ಎಸಿ ಕೋಚ್ ಗಳಲ್ಲಿ ಬೆಡ್ ಶೀಟ್ ನೀಡಲಾಗುವುದಿಲ್ಲ. ಪ್ಯಾಕ್ ಮಾಡಿದ ಆಹಾರಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರೈಲ್ವೆ ಸಚಿವಾಲಯವು ಪ್ರಯಾಣಿಕರಿಗೆ ಕೆಲ ನಿರ್ಬಂಧಗಳನ್ನು ಹೇರಿದೆ.
ಸಂಚರಿಸಲಿರುವ ರೈಲು ಮಾರ್ಗಗಳು:
ಬೆಂಗಳೂರು – ಶಿವಮೊಗ್ಗ, ಬೆಂಗಳೂರು – ಹುಬ್ಬಳ್ಳಿ, ಮುಂಬೈ – ಗದಗ, ಮುಂಬೈ – ಬೆಂಗಳೂರು ಸೇರಿ ಹಲವು ಮಾರ್ಗಗಳ ರೈಲು ಸೇವೆ ಇಂದಿನಿಂದ ಆರಂಭವಾಗಿದೆ.
ಮುಂಬೈ- ಬೆಂಗಳೂರು (ಟ್ರೈನ್ ನಂ 01301)
ಮುಂಬೈ- ಗದಗ (ಟ್ರೈನ್ ನಂಬರ್ 01139)
ಬೆಂಗಳೂರು- ದಾನಪುರ (ಟ್ರೈನ್ ನಂಬರ್ 02295)ಹಬ್ಬಳ್ಳಿ-ನಿಜಾಮುದ್ದೀನ್ (ಟ್ರೈನ್ ನಂಬರ್ 07305)
ಯಶವಂತಪುರ- ಶಿವಮೊಗ್ಗ (ಟ್ರೈನ್ ನಂಬರ್ 02089)
ಹುಬ್ಬಳ್ಳಿ- ಬೆಂಗಳೂರು (ಟ್ರೈನ್ ನಂಬರ್ 02080)
ಬೆಂಗಳೂರು- ಹುಬ್ಬಳ್ಳಿ (ಟ್ರೈನ್ ನಂಬರ್ 02079)
ಹೌರಾ-ಯಶವಂತಪುರ ನಡುವೆ ರೈಲು ಸಂಚಾರ ಆರಂಭವಾಗಿದೆ.
ಪ್ರಮುಖವಾಗಿ ದೆಹಲಿ ಹಾಗೂ ಮುಂಬೈನಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ನಲ್ಲಿ ಇರಿಸಲು ನಿರ್ಧರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ