Latest

ಕಾರವಾರ ಬಳಿ ದೋಣಿ ಮುಳುಗಿ ಜಾತ್ರೆಗೆ ತೆರಳಿದ್ದ 8 ಜನರ ಸಾವು

  ಪ್ರಗತಿವಾಹಿನಿ ಸುದ್ದಿ, ಕಾರವಾರ

ಕಾರವಾರ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಿ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದಕೊಪ್ಪಳದ ಒಂದೇ ಕುಟುಂಬದ 4 ಜನ ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. 

ಸಮುದ್ರದ ನಡುಗಡ್ಡೆಯಲ್ಲಿರುವ ಕೂರ್ಮಗಡದ ನರಸಿಂಹ ದೇವರ ಜಾತ್ರೆ ಪ್ರತಿ ವರ್ಷ ಜ.21ರಂದು ನಡೆಯುತ್ತದೆ. ಸೋಮವಾರ ಜಾತ್ರೆಗೆ ಹೋಗಿ ವಾಪಸ್ ಬರುತ್ತಿದ್ದಾಗ ದೋಣಿ ಮಗುಚಿದೆ.  ಕಾರವಾರದಿಂದ 6 ಕಿಮೀ ದೂರದಲ್ಲಿ ಘಟನೆ ನಡೆದಿದೆ. ದೋಣಿಯಲ್ಲಿ ಒಟ್ಟೂ 22 ಜನರಿದ್ದರು ಎನ್ನಲಾಗಿದ್ದು, ಇನ್ನಷ್ಟು ಜನರಿಗಾಗಿ ಶೋಧ ನಡೆಯುತ್ತಿದೆ. ದೋಣಿ ದೇವಭಾಗದ ಗಿರಿಧರ ಎಂಬುವವರಿಗೆ ಸೇರಿದ್ದು.

 

  

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button