ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಸುಮಾರು ಎರಡೂವರೆ ತಿಂಗಳ ಕಾಲ ಸಂಪೂರ್ಣ ಭಾರತವನ್ನು ಲಾಕ್ ಡೌನ್ ಮಾಡಿರುವ ಕೊರೋನಾದಿಂದಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸುಮಾರು 6 ತಿಂಗಳಷ್ಟು ಹಿಂದಕ್ಕೆ ಹೋಗಿವೆ.
ಮಳೆಗಾಲ ಆರಂಭಕ್ಕೆ ಮೊದಲು ಬಹುಪಾಲು ಕಾಮಗಾರಿಗಳನ್ನು ಮುಗಿಸಬೇಕೆನ್ನುವ ಗುರಿ ಇಟ್ಟುಕೊಂಡು ಹಲವು ಪಟ್ಟು ವೇಗವಾಗಿ ಕೆಲಸ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆಗೆ ಕೊರೋನಾ ದೊಡ್ಡ ಪೆಟ್ಟು ನೀಡಿದೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಆರಂಭದಿಂದಲೂ ಬಾಲಗ್ರಹ ಪೀಡೆ ತಗುಲಿದೆ. ಹಲವು ಬಾರಿ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ, ಕೇಂದ್ರ, ರಾಜ್ಯ ಸರಕಾರದ ರಾಜಕೀಯ ಲೆಕ್ಕಾಚಾರ, ತಾಂತ್ರಿಕ ಸಮಸ್ಯೆಗಳು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಪಡೆದಿರಲಿಲ್ಲ. ಆದರೆ ಕಳೆದ ಸುಮಾರು 6 ತಿಂಗಳಿನಿಂದ ಕಾಮಗಾರಿ ವೇಗ ಪಡೆದಿತ್ತು.
ಬಹುಪಾಲು ಕಾಮಗಾರಿಗಳನ್ನು ಜೂನ್ ಹೊತ್ತಿಗೆ ಒಂದು ಹಂತಕ್ಕೆ ತರುವ ಮತ್ತು ಡಿಸೆಂಬರ್ ಮೊದಲು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಹೊಂದಿದ್ದರು. ಅದರಂತೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಮಗಾರಿಗೆ ವೇಗ ನೀಡುವುದಕ್ಕಾಗಿ ಯಂತ್ರ ಮತ್ತು ಮಾನವಸಂಪನ್ಮೂಲಗಳನ್ನು ಹಲವು ಪಟ್ಟು ಹೆಚ್ಚಿಸಿದ್ದರು.
ಆದರೆ ಮಾರ್ಚ್ ಮಧ್ಯಭಾಗ ಬರುತ್ತಿದ್ದಂತೆ ಕೊರೋನಾ ಹಾವಳಿ ಆರಂಭವಾಯಿತು. ಲಾಕ್ ಡೌನ್ ನಿಂದಾಗಿ ಕಾಮಗಾರಿ ಸಂಪೂರ್ಣ ಸ್ಥಗಿತವಾಯಿತು. ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕೆಲಸಗಾರರು ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಯಿತು. ಯಂತ್ರಗಳೂ ನಿಂತಲ್ಲೇ ನಿಂತವು. 2 ತಿಂಗಳೂ ಪೂರ್ಣ ಕೆಲಸ ಸ್ಥಗಿತಗೊಂಡಿತು.
ಇದೀಗ ಕೆಲಸವೇನೋ ಪುನಾರಂಭವಾಗಿದೆ. ಆದರೆ ಮೊದಲಿನ ವೇಗ ನೀಡಲು ಹಲವು ವಿಘ್ನಗಳು ಉಂಟಾಗಿವೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಬಹುಪಾಲು ಕೆಲಸಗಾರರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಸ್ಥಳೀಯ ಕೆಲಸಗಾರರಿಂದ ಎಲ್ಲ ಕೆಲಸಗಳನ್ನೂ ಮಾಡಿಸಲು ಸಾಧ್ಯವಿಲ್ಲ.
ಅನೇಕ ಕೆಲಸಗಳಿಗೆ ತಾಂತ್ರಿಕ ಸಿಬ್ಬಂದಿಯೇ ಸಿಗುತ್ತಿಲ್ಲ. ಸಾಮಗ್ರಿಗಳೂ ಸರಿಯಾದ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಂಕ್ರಾಮಿಕ ರೋಗ ಅಪ್ಪಳಿಸಿದ್ದರಿಂದಾಗಿ ಗುತ್ತಿಗೆದಾರರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ.
ಇನ್ನು ಮಳೆಗಾಲವೂ ಬಾಗಿಲಿಗೆ ಬಂದು ನಿಂತಿದೆ. ಯಾವುದೇ ಕ್ಷಣದಲ್ಲಿ ಮಳೆ ಆರಂಭವಾಗಬಹುದು. ಆಗ ಎಲ್ಲ ಕೆಲಸಗಳನ್ನೂ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಮಾರ್ಚ್ ಮಧ್ಯಭಾಗದಲ್ಲಿ ಸ್ಥಗಿತವಾದ ಕಾಮಗಾರಿಗಳು ಮತ್ತೆ ಸರಿಯಾದ ವೇಗ ಪಡೆಯುವುದು ಅಕ್ಟೋಬರ್ ಹೊತ್ತಿಗೇ ಆಗಬಹುದು.
ಇದರಿಂದಾಗಿ ಒಟ್ಟಾರೆ ಕಾಮಗಾರಿಗಳು ನಿಗದಿಗಿಂತ 6 ತಿಂಗಳಷ್ಟು ವಿಳಂಬವಾಗಿ ಮುಕ್ತಾಯವಾಗುವ ಸಾಧ್ಯತೆ ಇದೆ.
ಶಶಿಧರ ಕುರೇರ
ಈಗ ಕಾಮಾಗಾರಿಗಳನ್ನು ಪುನಾರಂಭಿಸಲಾಗಿದೆ. ಆದರೆ ತಾಂತ್ರಿಕ ಪರಿಣಿತರು ತಮ್ಮ ತಮ್ಮ ಊರುಗಳಿಗೆ ಮರಳಿರುವುದರಿಂದ ಕೆಲವು ನಿರ್ಧಿಷ್ಟ ಕೆಲಸಗಳಿಗೆ ಸಿಬ್ಬಂದಿ ಸಿಗುತ್ತಿಲ್ಲ. ಹಾಗಾಗಿ ನಮ್ಮ ಗುರಿಯ ಪ್ರಕಾರ ಕಾಮಗಾರಿ ಮುಗಿಸಲು ಆಗುವುದಿಲ್ಲ. ಆದರೂ ಗುಣಮಟ್ಟದೊಂದಿಗೆ ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.
*ಕಸ್ತೂರಿ ರಂಗನ್ ವರದಿ ಜಾರಿ ಬೇಡ; ರೈತರ ಬದುಕು ಬೀದಿಗೆ ಬೀಳಲಿದೆ*
3 hours ago
*ಅನಾರೋಗ್ಯದ ಮಧ್ಯೆಯೂ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ ಅಮಿತ್ ಶಹ*
4 hours ago
*ಶಿಕ್ಷಕರು ಸಮಾಜ ನಿರ್ಮಾಣದ ಶಿಲ್ಪಿಗಳು: ಲಕ್ಷ್ಮೀ ಹೆಬ್ಬಾಳಕರ್*
4 hours ago
*ರೋಜ್ಗಾರ್ ಮೇಳ; ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ*
4 hours ago
*ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಬೇಕು: ಚನ್ನರಾಜ ಹಟ್ಟಿಹೊಳಿ*
5 hours ago
*ಲಿಂಗಾಯತ ತತ್ವಗಳ ತಿಳುವಳಿಕೆ ಮತ್ತು ಆಚರಣೆ ಮೂಲ ಉದ್ದೇಶವಾಗಬೇಕು: ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು*
5 hours ago
*ಮನೆ ಬಾಗಿಲಿಗೆ ಸರ್ಕಾರದ ಯೋಜನೆ; ಪ್ರಜಾಸೇವಾ ಆಂದೋಲನದ ಉದ್ದೇಶ: ಸಚಿವ ಸತೀಶ್ ಜಾರಕಿಹೊಳಿ*
5 hours ago
*ಕೆಎಲ್ಇ ಶಿಕ್ಷಣ–ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಕೊಡುಗೆ ನೀಡಿದೆ: ಪ್ರಹ್ಲಾದ ಜೋಶಿ* *ಹುಬ್ಬಳ್ಳಿಯಲ್ಲಿ ಕಾಹೆರ್ ಜೆಜಿಎಂಎಂ ಮೆಡಿಕಲ್ ಕಾಲೇಜು, ಕೆಎಲ್ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಲೋಕಾರ್ಪಣೆ*
6 hours ago
*ಮೀನುಗಾರರ ಮನದ ಮಾತಿಗೆ ಕಿವಿಗೊಟ್ಟ ಸಿಎಂ ಡಿ ಕೆ ಶಿವಕುಮಾರ್*
7 hours ago
*ಕುಡಿದ ಮತ್ತಿನಲ್ಲಿ ಪ್ರಿಯಕರನ ಕತ್ತು ಹಿಸುಕಿ ಕೊಲೆ: ಮಹಿಳೆ ಬಂಧನ*