ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಪಂಚದಾದ್ಯಂತ 4000 ಶಾಖೆ, 100 ದಶಲಕ್ಷ ಡಾಲರ್ ವ್ಯವಹಾರ ಹೊಂದಿರುವ, ಎರಡೂವರೆ ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಬ್ಯಾಂಕ್ -ಬ್ಯಾಂಕ್ ಆಫ್ ಅಮೇರಿಕಾಗೆ ಬೆಳಗಾವಿಯ ಶ್ರೀನಿವಾಸ ಸಾಮಂತ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.
ಸೆಂಟ್ ಝೇವಿಯರ್ ನಲ್ಲಿ ಹೈಸ್ಕೂಲ್ ಶಿಕ್ಷಣ ಹಾಗೂ ಜಿಎಸ್ಎಸ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದ ಸದಾನಂದ ಸಾಮಂತ ಅವರ ಪುತ್ರ ಶ್ರೀನಿವಾಸ, ಎಸ್ಎಸ್ಎಲ್ ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪೆಡೆದಿದ್ದರು. ಸುರತ್ಕಲ್ ಹಾಗೂ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು ಕಳೆದ 13 ವರ್ಷಗಳಿಂದ ಈ ಬ್ಯಾಂಕ್ ನಲ್ಲಿ ಸಂಚಾಲಕರೆಂದು ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ