ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಮನೆ ಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲಿಕ ಬಾಡಿಗೆದಾರರ ಮನೆಗೆ ಬಂದು ಫೈಯರಿಂಗ್ ಮಾಡಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿ ಜೀವ ಬೇದರಿಕೆ ಹಾಕಿದ್ದಾನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವಿದ್ಯಾಗಿರಿ ನಗರದಲ್ಲಿ ಈ ಘಟನೆ ನಡೆದಿದೆ. ರೋಹಿಣಿ ದೀಕ್ಷಿತ್ ಎಂಬುವರು ಬಾಡಿಗೆ ಮನೆಯಲ್ಲಿದ್ದವರು. ಮನೆ ಮಾಲೀಕ ನೂರ್ ಅಹಮ್ಮದ್ ಶಾಪುರ್ಕರ್ ಎಂಬಾತ ಧಮಕಿ ಹಾಕಿದ ಮನೆಯ ಮಾಲಿಕ.
ಕೇವಲ ಎರಡೂವರೆ ಸಾವಿರ ರೂಪಾಯಿಗಾಗಿ ಗುಂಡು ಹಾರಿಸಿ ಧಮಕಿ ಹಾಕಿದ್ದಾನೆೆ. ಲಾಕ್ ಡೌನ್ ಹಿನ್ನೆಲೆ ಎರಡು ತಿಂಗಳ ಬಾಡಿಗೆ ಹಣ ಕೊಡಲು ಆಗಿರಲಿಲ್ಲ.
ಹತ್ತು ಸಾವಿರ ಅಡ್ವಾನ್ಸ್ ಹಣ ಕಟ್ ಮಾಡಿಕೊಂಡು, ಇನ್ನೂ ಎರಡು ಸಾವಿರ ಹಣ ಬಾಡಿಗೆ ನೀಡುವಂತೆ ಒತ್ತಾಯಿಸಿದ್ದಾನೆ.
ಮುಂದಿನ ತಿಂಗಳು ಬಾಡಿಗೆ ಕೊಡ್ತೇನಿ ಅಂದಿದ್ದಕ್ಕೆ ಜೀವ ಬೇದರಿಕೆ ಹಾಕಿದ್ದಾನೆ. ಮನೆಯ ಮುಂಭಾಗದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ನೂರ್ ಅಹಮ್ಮದ್.
ಅದೃಷ್ಟವಶಾತ್ ಯಾರಿಗೂ ತಗುಲದೆ ಮನೆಯ ಮೇಲ್ಛಾವಣಿಗೆ ತಾಗಿದೆ ಗುಂಡು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಫೈರಿಂಗ್ ಮಾಡಿದ ನೂರ್ ಅಹ್ಮದ ಶಾಪುರ್ಕರ ನನ್ನು ಚಿಕ್ಕೋಡಿ ಪೊಲಿಸರು ವಶಕ್ಕೆ ಪಡೆದಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ