Latest

ಭಾರತ-ಚೀನಾ ಗಡಿಯಲ್ಲಿ ಸಂಘರ್ಷ; ಮೂವರು ಭಾರತೀಯ ಯೋಧರು ಹುತಾತ್ಮ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಮೂವರು ಭಾರತೀಯ ಸೈನಿಕರನ್ನು ಚೀನಾ ಸೇನೆ ಹತ್ಯೆಗೈದಿದೆ.

ಲಡಾಖ್ ನ ಗಲ್ವಾನ್ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಯಾವುದೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಬಳಕೆಯಾಗಿಲ್ಲ. ಪರಸ್ಪರ ಕಲ್ಲುತೂರಾಟ ನಡೆದಿದ್ದು, ಕೈಕೈ ಮಿಲಾಯಿಸಿಕೊಂಡಿದ್ದಾರೆ. ಭಾರತದ ಗಡಿಯೊಳಗೆ ನುಗ್ಗಿದ ಚೀನಾ ಸೈನಿಕರು ಮೂವರು ಭಾರತೀಯ ಸೈನಿಕರನ್ನು ಹಯೆಗೈದಿದ್ದಾರೆ. ಚೀನಿ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಘರ್ಷಣೆಯಲ್ಲಿ ಭಾರತೀಯ ಸೇನೆಯ ಓರ್ವ ಸೈನ್ಯಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಶಾಂತಿ ಮಾತುಕತೆ ಬಳಿಕ ಎರಡೂ ದೇಶಗಳ ಸೈನಿಕರನ್ನು ಗಡಿಯಿಂದ ಹಿಂಪಡೆಯುವ ಪ್ರಕ್ರಿಯೆ ನಡುವೆಯೇ ಚೀನಿ ಸೈನಿಕರು ಉದ್ಧಟತನ ಮೆರೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಲುತೂರಾಟದಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ.

Home add -Advt

Related Articles

Back to top button