ಪ್ರಗತಿವಾಹಿನಿ ಸುದ್ದಿ; ಜೈಪುರ: ಪತ್ನಿಯ ಮೇಲೆ ತನ್ನ ಸ್ನೇಹಿತ ಅತ್ಯಾಚಾರ ನಡೆಸುತ್ತಿದ್ದರೆ ಅದನ್ನು ತಪ್ಪಿಸುವುದನ್ನು ಬಿಟ್ಟು ಪತಿ ಮಹಾಶಯನೊಬ್ಬ ಹೊರಗಡೆ ಲಾಠಿ ಹಿಡಿದು ಕಾವಲು ಕಾಯುತ್ತಿದ್ದ ಹೇಯ ಕೃತ್ಯ ಜೈಪುರದಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರುಕಟ್ಟೆಗೆ ಹೋಗುವ ನೆಪದಲ್ಲಿ ಪತಿ ಸಂತ್ರಸ್ತೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದ. ದಾರಿಯಲ್ಲಿ ಆರೋಪಿ ತನ್ನ ಸ್ನೇಹಿತ ಮಿಚ್ಚು ಅಲಿಯಾಸ್ ಬಲ್ವಂತ್ ಧಾನಕ್‍ನನ್ನು ಅದೇ ಬೈಕ್‍ನಲ್ಲಿ ತನ್ನೊಂದಿಗೆ ಬರಲು ಕೇಳಿಕೊಂಡಿದ್ದಾನೆ. ಪತಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದನು. ಬೈಕಿನಿಂದ ಇಳಿದು ಸ್ವಲ್ಪ ಸಮಯ ಅಲ್ಲೆ ಕುಳಿತ್ತಿದ್ದೆವು. ಆಗ ಧಾನಕ್ ಬಂದು ನನ್ನನ್ನು ಹತ್ತಿರದಲ್ಲಿದ್ದ ರೂಮಿಗೆ ಎಳೆದುಕೊಂಡು ಹೋದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗ ಪತಿ ಲಾಠಿ ಹಿಡಿದು ರೂಮಿನ ಹೊರಗೆ ಕಾವಲು ನಿಂತಿದ್ದ. ಸ್ನೇಹಿತ ತನ್ನ ಮೇಲೆ ಅತ್ಯಾಚಾರ ನಡೆಸಲು ಪತಿಯೇ ಸಂಚು ರೂಪಿಸಿದ್ದ ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಅಲ್ಲದೇ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದಲ್ಲಿ ಕೊಲೆ ಮಾಡುವುದಾಗಿ ಇಬ್ಬರೂ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಹಾಗೂ ಆರೋಪಿ ಇಬ್ಬರನ್ನೂ ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ