ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2 ಬೇಡಿಕೆಗಳನ್ನು ಮುಂದಿಟ್ಟು ಬೆಳಗಾವಿಲ್ಲಿ ಇಂದು ರೈತರು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮುತ್ತಿಗೆ ಹಾಕಿದರು.
ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸಚಿವರು ಬರುತ್ತಿದ್ದಂತೆ ಮುತ್ತಿಗೆ ಹಾಕಿದ ರೈತರು, ಸಕ್ಕರೆ ನಿರ್ದೇಶನಾಲಯವನ್ನು ವಿಲೀನಗೊಳಿಸಬಾರದು. ಬದಲಾಗಿ ಸರಕಾರ ಈಗಾಗಲೆ ನಿರ್ಧರಿಸಿದಂತೆ ಬೆಳಗಾವಿಗೆ ಸ್ಥಳಾಂತರಿಸಬೇಕು. ಇದರಿಂದ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಆಗ್ರಹಸಿದರು.
ಜೊತೆಗೆ, ಜಿಲ್ಲೆಯ ಹಲವಾರು ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ ಬಾಕಿ ಉಳಿಸಿಕೊಂಡಿವೆ. ತಕ್ಷಣ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಚಿವರು ಸಭೆಗೆ ಹೋಗುವ ವೇಳೆ ಮುತ್ತಿಗೆ ಹಾಕಿದ ರೈತರು ಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. 15 ದಿನದಲ್ಲಿ ಕಬ್ಬಿನ ಬಿಲ್ ಪಾವತಿಸುವಂತೆ ಸಭೆಯಲ್ಲಿ ಸಚಿವರು ಸೂಚಿಸಿದರು. ಆದರೆ ಸಕ್ಕರೆ ನಿರ್ದೇಶನಾಲಯದ ಕುರಿತಂತೆ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ.
ವಿಪರ್ಯಾಸವೆಂದರೆ ಅಕ್ಟೋಬರ್ 19ರಂದು ಬೆಳಗಾವಿಗೆ ಬಂದಿದ್ದ ಅಂದಿನ ಸಕ್ಕರೆ ಸಚಿವ ಸಿ.ಟಿ.ರವಿ, ಕಬ್ಬಿನ ಬಿಲ್ ಪಾವತಿಸಲು ನವೆಂಬರ್ 5ರ ಗಡುವು ನೀಡಿ ಹೋಗಿದ್ದರು. ಇಂತಹ ಹತಾತರು ಗಡುವುಗಳು ಈಗಾಗಲೆ ಆಗಿವೆ, ಮುಂದೂ ಆಗುತ್ತವೆ. ಆದರೆ ಸಕ್ಕರೆ ಕಾರ್ಖಾನೆ ಮಾಲಿಕರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಸರಕಾರಕ್ಕೆ ಬಿಲ್ ಕೊಡಿಸುವ ತಾಖತ್ತೂ ಇಲ್ಲ.
ಉತ್ತರ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಶಾಕ್
ಕಬ್ಬಿನ ಬಾಕಿ ಹಣ 15 ದಿನಗಳಲ್ಲಿ ರೈತರಿಗೆ ಪಾವತಿಸಿ
ಕಬ್ಬಿನ ಬಾಕಿ ಬಿಲ್ ಪಾವತಿಗೆ ನ.5 ವರೆಗೆ ಗಡುವು- ಸಕ್ಕರೆ ಸಚಿವ ಸಿ.ಟಿ.ರವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ