ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಕ್ಕಳ ಆಟಿಕೆ ಅಂಗಡಿಗೆ ಬಂದ ಮಹಿಳಾ ಗ್ರಾಹಕಳನ್ನು ಕೊಲೆ ಮಾಡಿದ ಅಂಗಡಿ ಮಾಲೀಕ ಆಕೆಯ ಶವದೊಂದಿಗೆ ಸೆಕ್ಸ್ ಮಾಡಿ ವಿಕೃತಿ ಮೆರೆದಿರುವ ಘಟನೆ ಮುಂಬೈನ ನಲಸೋಪರಾದಲ್ಲಿ ನಡೆದಿದೆ.
ಜೂನ್ 26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 26 ರಂದು 32 ವರ್ಷದ ಮಹಿಳೆ ದಿನಸಿ ಖರೀದಿಸಲು ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಮಹಿಳೆ ತನ್ನ ಮಕ್ಕಳಿಗೆ ಆಟಿಕೆಗಳನ್ನು ಖರೀದಿಸಲು ಆರೋಪಿಯ ಅಂಗಡಿಗೆ ಹೋಗಿದ್ದಾರೆ. ಅಂದಿನಿಂದ ಮೃತ ಮಹಿಳೆ ನಾಪತ್ತೆಯಾಗಿದ್ದಾರೆ.
ದಿನಸಿ ಖರೀದಿಸಲು ಹೋಗಿದ್ದ ಪತ್ನಿ ನಾಪತ್ತೆಯಾಗಿದ್ದರಿಂದ ಪತಿ ನಲಸೋಪರಾದಲ್ಲಿ ಟ್ಯೂಲಿಂಗ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ದೂರು ದಾಖಲಿಸಿದ್ದರು. ಜೂನ್ 28 ರಂದು ನಲಸೋಪರಾದ ಚಂದನ್ ನಾಕಾದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವ್ಯಾನ್ ಒಳಗೆ ಮಹಿಳೆಯ ಶವ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗೆಂದು ಪೊಲೀಸರು ಆಸ್ಪತ್ರೆಗೆ ರವಾನಿಸಿದಾಗ ಮಹಿಳೆಯನ್ನು ಕತ್ತು ಹಿಸುಕಿ ಹತ್ಯೆಗೈಯ್ಯಲಾಗಿದೆ ಅಲ್ಲದೇ ಶವದ ಜೊತೆ ಸೆಕ್ಸ್ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪಾಲ್ಘರ್ ಅಪರಾಧ ವಿಭಾಗದ ತಂಡ ತನಿಖೆಯನ್ನು ಪ್ರಾರಂಭಿಸಿದ್ದು, ಪಿಕ್‍ಅಪ್ ವ್ಯಾನ್ ಮಾಲೀಕರು ಹಲವಾರು ದಿನಗಳಿಂದ ವಾಹನವನ್ನು ನಾಕಾದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಅಂಗಡಿ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬಾಯ್ಬಿಟ್ಟಿದ್ದಾನೆ. ಜೂನ್ 26 ರಂದು ಆಟಿಕೆಗಳ ಬೆಲೆಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಅಂಗಡಿ ಮಾಲೀಕನ ಮಧ್ಯೆ ವಾಗ್ವಾದ ನಡೆದಿದೆ. ವಾದದ ನಂತರ ಆರೋಪಿ ಮಹಿಳೆಯನ್ನು ಅಂಗಡಿಯ ಹಿಂದೆ ಇರುವ ಕೋಣೆಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ ಆರೋಪಿ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಮೃತದೇಹದ ಜೊತೆ ಸೆಕ್ಸ್ ಮಾಡಿದ್ದಾನೆ ನಂತರ ಮಹಿಳೆಯ ಮೃತದೇಹವನ್ನು ಕವರ್ ನಲ್ಲಿ ಸುತ್ತಿ, ನಿಲ್ಲಿಸಿದ್ದ ವ್ಯಾನ್‍ನಲ್ಲಿ ಎಸೆದಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ