ಪ್ರಗತಿವಾಹಿನಿ ಸುದ್ದಿ, ಮುಗಳಖೋಡ : ಸಮೀಪದ ಹಾರೂಗೇರಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದಲ್ಲಿ ಸ್ವಯಂ ಪ್ರೇರಣೆಯಿಂದ ಗುರುವಾರ ಸಂಜೆ ೫ ಗಂಟೆಯಿಂದ ಬಂದ್ ಮಾಡಲಾಗಿದೆ.
ಹಾರೂಗೇರಿ ಪಟ್ಟಣದ ವಿದ್ಯಾ ನಗರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಬುಧವಾರ ಬರುತ್ತಿದ್ದಂತೆ ಮುಗಳಖೋಡ ಪುರಸಭೆ ಸದಸ್ಯರಾದ ಕೆಂಪಣ್ಣ ಮುಶಿ, ರಮೇಶ ಖೇತಗೌಡರ, ಅಂಗಡಿ ಮಾಲಿಕರ ಸಭೆ ಕರೆದು ಹಾರೂಗೇರಿ – ಮುಗಳಖೋಡ ಅವಳಿ ಪಟ್ಟಣ ೧೨ ಕಿ.ಮೀ. ಅಂತರವಿದ್ದು ಜನ ಸಂಪರ್ಕ ಹೆಚ್ಚಾಗಿರುವುದರಿಂದ ಮುಗಳಖೋಡ ಪಟ್ಟಣದಲ್ಲಿ ಮುಂಜಾಗೃತೆ ಕ್ರಮವಾಗಿ ಸೋಮವಾರದ ವರೆಗೆ ಸಂಜೆ ೫ರಿಂದ ಮುಂಜಾನೆ ೬ ಗಂಟೆಯವರೆಗೆ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸುವಂತೆ ಮನವಿ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಅಂಗಡಿ ಮಾಲಿಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕೊರೋನಾ ಮಹಾಮಾರಿ ರೋಗದ ವಿರುದ್ದ ಹೋರಾಡಲು ಸಿದ್ದರಾಗಿ ಮಾಸ್ಕ್, ಸ್ಯಾನಿಟೈಜರ ಉಪಯೋಗಿಸುವಂತೆ ಸೂಚಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ