Kannada NewsKarnataka NewsLatest

ಹಿರೇಬಾಗೇವಾಡಿ ಗ್ರಾಮದೇವಿಯ ಉಡಿ ತುಂಬಿದ ಶಾಸಕಿ

ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ –  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಸಂಜೆ ಹಿರೇಬಾಗೇವಾಡಿಗೆ ತೆರಳಿ ಗ್ರಾಮ ದೇವಿಯ ಉಡಿ ತುಂಬಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮ ಕೊರೋನಾ ಮಹಾಮಾರಿಯಿಂದಾಗಿ ತೊಂದರೆಗೊಳಗಾಗಿತ್ತು. ಆ ಸಂದರ್ಭದಲ್ಲಿ ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡುತ್ತ ಜನರಲ್ಲಿ ಧೈರ್ಯ ಹೇಳುವ ಜೊತೆಗೆ, ಅವರಿಗೆ ಅಗತ್ಯ ಸಾಮಗ್ರಿಗಳ ನೆರವು ನೀಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸರಕಾರದಿಂದಲೂ ಸೌಲಭ್ಯಗಳು ದೊರೆಯುವಂತೆ ಮಾಡಿದ್ದರು. ಜಿಲ್ಲಾಡಳಿತವನ್ನೇ ಗ್ರಾಮಕ್ಕೆ ಕರೆದೊಯ್ದು ಜನರ ಅಹವಾಲು ಆಲಿಸಿ, ಸಕಲ ವ್ಯವಸ್ಥೆ ಮಾಡಿಸಿದ್ದರು.
ಇದೀಗ ಗ್ರಾಮಕ್ಕೆ ತೆರಳಿ ಗ್ರಾಮದೇವಿಯ ಉಡಿ ತುಂಬಿ, ಜನರಿಗೆ ಆರೋಗ್ಯ ದಯಪಾಲಿಸುವಂತೆ ಪ್ರಾರ್ಥಿಸಿದರು. ಜನರು ನೆಮ್ಮದಿಯಿಂದ ಬಾಳುವಂತೆ, ಅವರ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತಾಗಲಿ ಎಂದೂ ಅವರು ದೇವಿಯಲ್ಲಿ ಕೇಳಿಕೊಂಡರು.
ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ ಹೆಬ್ಬಾಳಕರ್, ಅಡಿವೇಶ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button