Kannada NewsKarnataka NewsLatest

10 ಸಾವಿರ ಕುಟುಂಬಗಳಿಗೆ 8 ದಿನ ಉಚಿತ ಹಾಲು ಪೂರೈಕೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿ ಪಟ್ಟಣದಲ್ಲಿ ಕೊರೋನಾ ಈವರೆಗೂ ಕಾಣಿಸದಿದ್ದರೂ, ಮುಂದಿನ ದಿನಗಳಲ್ಲಿ ಅಪಾಯ ಬರಬಾರದೆನ್ನುವ ಕಾರಣಕ್ಕೆ ಸ್ವಯಂ ಲಾಕ್ ಡೌನ್ ಘೋಷಿಸಿಕೊಳ್ಳಲಾಗಿದೆ.
ಪಟ್ಟಣದಲ್ಲಿ 8 ದಿನಗಳ ಕಾಲ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಯಂ ಲಾಕ್ ಡೌನ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಕಾಶ  ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ತಾವೇ  ಸ್ವತಃ  8 ದಿನಗಳ ಕಾಲ ಪಟ್ಟಣದ ಎಲ್ಲ ಜನರಿಗೂ ಹಾಲನ್ನು ಉಚಿತವಾಗಿ ಪೂರೈಸಲು ನಿರ್ಧರಿಸಿದ್ದಾರೆ.
ಪಟ್ಟಣದ ಸುಮಾರು 10 ಸಾವಿರ ಕುಟುಂಬಗಳಿಗೆ 16 ದಿನಗಳವರೆಗೆ ದಿನಬಿಟ್ಟು ದಿನ ಹಾಲಿನ ಪೂರೈಕೆಯಾಗಲಿದೆ. ಅಂದರೆ 8 ದಿನ ಪ್ರತಿ ಕುಟುಂಬಕ್ಕೆ ಹಾಲು ಸಿಗಲಿದೆ.
  “ಹೊರಗಡೆ ಬಂದಾಗ ಕಡ್ಡಾಯವಾಗಿ  ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಗಣೇಶ ಹುಕ್ಕೇರಿ ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button