Latest

ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಮಾನವಿಯ ಗುಣ ಬೆಳೆಸಬೇಕು -ಡಾ.ಕೆ.ವ್ಹಿ.ಪಾಟೀಲ

    ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ
ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಮಾನವಿಯ ಗುಣಗಳನ್ನು ಬೆಳೆಸಬೇಕು ಎಂದು ಸಾಯಿನಾಥ ಆಸ್ಪತ್ರೆಯ ಡಾ. ಕೆ. ವ್ಹಿ. ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಗಣರಾಜ್ಯೋತ್ಸವದ ನಿಮಿತ್ತ ಸಮೀಪದ ಕೋರಕೊಪ್ಪ ಗ್ರಾಮದ ರೇವಣಸಿದ್ದೇಶ್ವರ ನಿರ್ಗತಿಕ ಮಕ್ಕಳ ಕುಟೀರದಲ್ಲಿ ಶನಿವಾರ ನಡೆದ ಮಾತೃಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ ಜೊತೆಯಲ್ಲಿ ನಿರ್ಗತಿಕ ಮಕ್ಕಳಿಗೂ ಕೈತುತ್ತು ನೀಡಿ ನಿರ್ಗತಿಕ ಮಕ್ಕಳಿಗೆ ಮಾತೃ ವಾತ್ಸಲ್ಯವನ್ನು ನೀಡಿದರು.
ರೇವಣಸಿದ್ದ ಸ್ವಾಮಿಜಿಗಳು ಮಾತನಾಡುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ನಿರ್ಗತಿಕ ಮಕ್ಕಳ ಕಲ್ಯಾಣ ಮಾಡುವುದೇ ಮಠದ ಉದ್ದೇಶವಾಗಿದೆ ಎಂದರು.
ಸೊಪ್ಪಡ್ಲ ಗ್ರಾಪಂ ಅಧ್ಯಕ್ಷ ಸುರೇಶ ಬಂಟನೂರ ಮಾತನಾಡಿದರು. ಮಹಾಂತ ಸಂಸ್ಥೆಯ ಅಧ್ಯಕ್ಷ ಬಸವರಾಜ ಆಯಟ್ಟಿ ಅಧ್ಯಕ್ಷತೆವಹಿಸಿದ್ದರು. ರಂಗಪ್ಪ ಅಣ್ಣಿಗೇರಿ, ಕೋ.ಶಿವಾಪೂರ ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ ಕಂಬಾರ, ಯರಗಟ್ಟಿ ಶಾಲೆಯ ಮುಖ್ಯ ಶಿಕ್ಷಕ ಮೃತ್ಯುಂಜಯ ಹಳದಾರಮಠ, ಗೋರೆಸಾಬ ನದಾಫ್ ಉಪಸ್ಥಿತರಿದ್ದರು. ಅನೀಶಾ ಮಾತಾಜಿ ಸ್ವಾಗತಿಸಿದರು. ಲಕ್ಷ್ಮೀಬಾಯಿ ಹಣಬರ ನಿರೂಪಿಸಿದರು. ಸೃಷ್ಟಿ ಪಟ್ಟಣಶೆಟ್ಟಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button