Latest

ಏಕದಶ ಲಕ್ಷ ಬಿಲ್ವಾರ್ಚನೆಗೆ ಶ್ರೀಶೈಲ ಶ್ರೀ ಚಾಲನೆ

   ಪ್ರಗತಿವಾಹಿನಿ ಸುದ್ದಿ, ಮಾಂಜರಿ
ಸಮೀಪದ ಸುಕ್ಷೇತ್ರ ಯಡೂರ ಗ್ರಾಮದಲ್ಲಿನ ಶ್ರೀ ವೀರಭದ್ರ ವಿಶಾಳಿ ಜಾತ್ರಾ ಮಹೋತ್ಸವದ ಅಂಗವಾಗಿ 11 ದಿನಗಳ ಕಾಲ ನಡೆಯಲಿರುವ ಶ್ರೀ ವೀರಭದ್ರ ದೇವರಿಗೆ ಏಕದಶ ಲಕ್ಷ ಬಿಲ್ವಾರ್ಚನೆಗೆ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶನಿವಾರ ಸಂಜೆ ಶ್ರೀ ವೀರಭದ್ರರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.

ವೈಧಿಕ ಪಾಠಶಾಲೆ ವಿದ್ಯಾರ್ಥಿಗಳಿಂದ ಮಂತ್ರ ಘೋಷ ನಡೆಯಿತು. ಈ ಸಂದರ್ಭದಲ್ಲಿ ಮಾಂಜರಿ ಕಾಡಸಿದ್ದೇಶವರ ಮಠದ ಶ್ರೀ ಗುರುಶಾಂತ ದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿಗಳು, ಮಲ್ಲಯ್ಯಾ ಜಡೆ, ಅರ್ಚಕರು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಫೇಬ್ರವರಿ ದಿ. 3 ರವರಗೆ ದಿನನಿತ್ಯ ಸಾಯಂಕಾಲ 4.30 ರಿಂದ 6.30 ರವರೆಗೆ 11 ದಿನಗಳ ಕಾಲ ಶ್ರೀ ವೀರಭದ್ರ ದೇವರಿಗೆ ಏಕದಶ ಲಕ್ಷ ಬಿಲ್ವಾರ್ಚನೆ ನಡೆಯಲಿದೆ.
ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳ ಸಾನಿಧ್ಯದಲ್ಲಿ ದಿನ ನಿತ್ಯ 108 ಜನ ಭಕ್ತರಿಂದ 1008 ಬಿಲ್ವಾರ್ಚಾನೆ ನಡೆಯಲಿದೆ.

ಶ್ರೀ ವೀರಭದ್ರ ದೇವರಿಗೆ ಏಕದಶ ಲಕ್ಷ ಬಿಲ್ವಾರ್ಚಣೆ ಗೆ ಶ್ರೀಶೈಲ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button