ಬೆಳಗಾವಿಯಲ್ಲಿ 87, ರಾಜ್ಯದಲ್ಲಿ 4120 ಜನರಿಗೆ ಇಂದು ಸೋಂಕು ಪತ್ತೆ, 91 ಜನರ ಸಾವು, 10 ಲಕ್ಷ ಜನರ ಪರೀಕ್ಷೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಟ್ಟೂ 4120 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 91 ಜನರು ಸಾವಿಗೀಡಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 63772ಕ್ಕೇರಿದ್ದು, ಮೃತರಾದವರ ಸಂಖ್ಯೆ 1331 ಆಗಿದೆ.
ಇಂದು ಬೆಂಗಳೂರಿನಲ್ಲಿ 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಬಳ್ಳಾಪುರ 135, ಉಡುಪಿ 134, ಧಾರವಾಡ 126, ಮೈಸೂರು 110, ಶಿವಮೊಗ್ಗ 104, ಬೆಳಗಾವಿ 87, ಬಳ್ಳಾರಿ 73, ಬೆಂಗಳೂರು ಗ್ರಾಮಾಂತರ 70, ಕಲಬುರಗಿ, ಉತ್ತರ ಕನ್ನಡ 69, ದಾವಣಗೆರೆ 62, ಬಾಗಲಕೋಟೆ 60, ಹಾವೇರಿ 54, ಬೀದರ್ 45, ಹಾಸನ 43, ಚಿಕ್ಕಮಗಳೂರು 41, ರಾಯಚೂರು 32, ಗದಗ 30, ರಾಮನಗರ 29, ಕೋಲಾರ, ಚಾಮರಾಜನರ 25, ತುಮಕೂರು, ಕೊಪ್ಪಳ್ಳ 19, ಚಿತ್ರದುರ್ಗ 17, ಕೊಡಗು 13, ಯಾದಗಿರಿ 10, ಮಂಡ್ಯದಲ್ಲಿ 7 ಜನರಿಗೆ ಸೋಂಕು ಪತ್ತೆಯಾಗಿದೆ.
ಇಂದು ಬೆಂಗಳೂರಿನಲ್ಲಿ 36, ಮೈಸೂರಿನಲ್ಲಿ 11, ಬೆಳಗಾವಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಕೋಲಾರದಲ್ಲಿ 5, ಕೊಪ್ಪಳ, ಗದಗದಲ್ಲಿ 4 ಜನರು ಸಾವಿಗೀಡಾಗಿದ್ದಾರೆ.
ಅಥಣಿಯ 56 ವರ್ಷದ ಮಹಿಳೆ ಮತ್ತು ಬೆಳಗಾವಿಯ 50 ವರ್ಷದ ಮಹಿಳೆ ಸಾವಿಗೀಡಾಗಿದ್ದಾಳೆ.
ರಾಜ್ಯದಲ್ಲಿ 88 ಲ್ಯಾಬ್ ಗಳಿಂದ ಒಟ್ಟೂ 10, 20, 830 ಜನರ ಪರೀಕ್ಷೆ ಮಾಡಲಾಗಿದೆ. ಇಂದು ಒಂದೇ ದಿನ 35, 834 ಜನರ ಸ್ವ್ಯಾಬ್ ಪರೀಕ್ಷೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ