ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಬಿಮ್ಸ್ ಆವರಣದಲ್ಲಿ ದಾಂಧಲೆ ನಡೆಸಿ ಅಂಬುಲೆನ್ಸ್ ಗೆ ಬಂಕಿ ಹಚ್ಚಿದ್ದ 22 ಪುಂಡರನ್ನು ಬಂಧಿಸಲಾಗಿದೆ. ಇವರ ಪೈಕಿ 20 ಜನರ ಕೊರೋನಾ ಟೆಸ್ಟ್ ವರದಿ ಬಂದಿದ್ದು ಅವರಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನೂ ಇಬ್ಬರ ವರದಿ ಬರಬೇಕಿದೆ.
ಇದೇ 22ರಂದು ರಾತ್ರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬೆಂಕಿ ಹಚ್ಚು, ಕಲ್ಲು ತೂರಾ ನಡೆಸಿ ದಾಂದಲೆ ನಡೆಸಲಾಗಿತ್ತು. 20-25 ಜನರು ಬೈಕ್ ಗಳಲ್ಲಿ ಬಂದು ಗಲಾಟೆ ನಡೆಸಿ ಪರಾರಿಯಾಗಿದ್ದರು.
ಇದೀಗ 22 ಜನರನ್ನು ಬಂಧಿಸಲಾಗಿದೆ. ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಆ ಪೈಕಿ 20 ಜನರ ವರದಿ ಈಗ ಪೊಲೀಸರ ಕೈ ಸೇರಿದೆ. 13 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇನ್ನೂ ಇಬ್ಬರ ವರದಿ ನಿರೀಕ್ಷಿಸಲಾಗುತ್ತಿದೆ.
ಆರೋಪಿಗಳನ್ನು ಬಂಧಿಸುವಾಗ ಪೊಲೀಸರು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದರು. ಜೊತೆಗೆ ಅವರನ್ನು ಪೊಲೀಸ್ ಠಾಣೆಯೊಳಗೆ ಸೇರಿಸಿಕೊಳ್ಳದೆ ಹೊರಗಡೆಯೇ ಕೂಡ್ರಿಸಲಾಗಿತ್ತು ಎಂದು ಪೊಲೀಸ್ ಇನಸ್ಪೆಕ್ಟರ್ ಜಾವೇದ್ ಮುಷಾಪುರಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಹಾಗಾಗಿ ಅವರನ್ನು ಬಂಧಿಸಿದ ಪೊಲೀಸರಿಗೆ ಅಪಾಯವಾಗುವ ಸಾಧ್ಯತೆ ಕಡಿಮೆ.
ಸಂಬಂಧಿಸಿದ ಸುದ್ದಿಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ –
ಬೆಳಗಾವಿ ಆಸ್ಪತ್ರೆ ಎದುರು ಹಿಂಸಾಚಾರ: ಬೆಂಕಿ, ಕಲ್ಲು ತೂರಾಟ
ಬೆಳಗಾವಿ ಹಿಂಸಾಚಾರ ಪೂರ್ವಯೋಜಿತವೇ?
ಬೆಳಗಾವಿ ಹಿಂಸಾಚಾರ: 14 ಪುಂಢರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ