Latest

ಸಚಿವಾಕಾಂಕ್ಷಿ ಶಾಸಕರಿಗೆ ನಿಗಮ ಮಂಡಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಸಂಭ್ರಮದ ದಿನವೇ ವಿವಿಧ ನಿಗಮ ಮಂಡಳಿಗೆ ಅಧಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಹಲವಾರು ಸಚಿವಾಕಾಂಕ್ಷಿ ಶಾಸಕರುಗಳಿಗೆ ನಿಗಮ ಮಂಡಳಿ ಗಿಫ್ಟ್ ನೀಡಿದೆ.

24 ಶಾಸಕರುಗಳಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀದಿ ಸರ್ಕಾರ ಆದೇಶ ನೀಡಿದೆ. ನಿಗಮ ಮಂಡಳಿ ನೇಮಕದ ಪಟ್ಟಿ ಈ ಕೆಳಗಿನಂತಿದೆ:

ಅರಗ ಜ್ಞಾನೇಂದ್ರ-ಕರ್ನಾಟಕ ಗೃಹಮಂಡಳಿ ಅಧ್ಯಕ್ಷರಾಗಿ ನೇಮಕ
ಹೆಚ್ ಹಾಲಪ್ಪ- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್

ಎಂ.ಚಂದ್ರಪ್ಪ – ಕೆಎಸ್ ಆರ್ಟಿಸಿ
ಶಿವನಗೌಡ ನಾಯಕ್- ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
ರಾಜೂಗೌಡ- ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಪ್ರೀತಮ್ ಗೌಡ- ಜಂಗಲ್ ಲಾಡ್ಜ್
ರಾಜ್ ಕುಮಾರ್ ಪಾಟೀಲ್-ಈಶಾನ್ಯ ಕರ್ನಾಟಕ ಸಾರಿಗೆ

ಪರಣ್ಣ ಮುನಳ್ಳಿ-ರಾಜ್ಯ ಹಣಕಾಸು ಸಂಸ್ಥೆ
ಕಳಕಪ್ಪ ಬಂಡಿ-ಕೆ ಎಸ್ ಎಸ್ ಐಡಿಸಿ

ಎ ಎಸ್ ಪಾಟೀಲ್- ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿ
ಕೆ ಮಾಡಾಳ್ ವಿರೂಪಾಕ್ಷಪ್ಪ-ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
ಹೆಚ್ ತಿಪ್ಪಾರೆಡ್ಡಿ- ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ಸಿದ್ದು ಸವದಿ-ಕರ್ನಾಟಕ ಕೈಮಗ್ಗ ಅಭಿವೃದ್ಧಿ,ನಿಗಮ ನಿಯಮಿತ

ದತ್ತಾತ್ರೇಯ ಪಾಟೀಲ್-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
ಶಂಕರ್ ಪಾಟೀಲ್ – ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ
ಹೆಚ್ ನಾಗೇಶ್- ತೆಂಗಿನ ನಾರಿನ ಅಭಿವೃದ್ಧಿ ನಿಗಮ
ಎಸ್ ವಿ ರಾಮಚಂದ್ರ – ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡ ಅಭಿವೃದ್ಧಿ ನಿಗಮ
ನೆಹರು ಓಲೇಕಾರ್- ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
ಐಹೊಳೆ ದುರ್ಯೋಧನ – ರಾಜ್ಯ ಖ್ಯಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಲಾಲಾಜಿ ಆರ್ ಮೆಂಡನ್ – ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಬಸವರಾಜ್ ದಡೇಸೂರ್ – ರಾಜ್ಯ ಸಮಾಜ ಕಲ್ಯಾಣ ಮಂಡಳಿ
ಎಸ್ ಶಿವರಾಮ್ ಪಾಟೀಲ್- ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
ಸಿ ಎಸ್ ನಿರಂಜನ್ ಕುಮಾರ್ – ಅರಣ್ಯ ಕೈಗಾರಿಕೆ ನಿಗಮ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button