ಪ್ರಗತಿವಾಹಿನಿ ಸುದ್ದಿ, ಮಾಂಜರಿ
ಎರಡು ಬೈಕ್ ಗಳ ಮಧ್ಯೆ ಮುಖಾ ಮುಖಿ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.
ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ವಡ್ರಾಳ ಗ್ರಾಮದ ನಿವಾಸಿಗಳಾದ ಶಂಕರ ಘಾಟಗೆ (೩೫), ಬೀರಪ್ಪ ಖೋತ (೫೨), ಚಿಂಚಣಿ ಗ್ರಾಮದ ನಿವಾಸಿ ಪ್ರವೀಣ ಪಾಟೀಲ ಮೃತರು.
ಬೈಕ್ ನಲ್ಲಿದ್ದ ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಜಾನವ್ವ ಬಬಲೇಶ್ವರ (೯) ಲಕ್ಷ್ಮೀ ಬಬಲೇಶ್ವರ (೩೨) ಸ್ಥಿತಿ ಗಂಭೀರವಾಗಿದೆ.
ಗಂಭೀರ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳು ವಡ್ರಾಳ ಗ್ರಾಮದ ನಿವಾಸಿಗಳಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ