ಶಾಮ ಹಂದೆ, ಮುಂಬೈ: ಮುಂಬಯಿಯಾದ್ಯಂತದ ಮಾಲ್, ಅಂಗಡಿ ಮುಂಗಟುಗಳನ್ನು ಆಗಸ್ಟ್ 5ರಿಂದ ಲಾಕ್ ಡೌನ್ ನಿಂದ ತೆರವುಗೊಳಿಸಲಾದರೂ ಭಾರೀ ಮಳೆಯಿಂದಾಗಿ ಮುಂಬಯಿ ಜೀವನ ಅಸ್ತವ್ಯಸ್ತವಾಗಿ ಪುನಃ ಲಾಕ್ ಡೌನ್ ಮಾಡುವಂತಾಗಿದೆ.
ಮುಂಬೈ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಭಾರಿ ಮಳೆಯಾಗಿದೆ. ಸತತ ಮಳೆಯಿಂದಾಗಿ, ರಸ್ತೆಗಳ ಜೊತೆಗೆ ರೈಲ್ವೆ ಸಂಚಾರಕ್ಕೂ ತೊಂದರೆಯಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ಮುಂಬೈ ಪೊಲೀಸರು ನಾಗರಿಕರಿಗೆ ಮನೆ ಹೋರಬೀಳದಂತೆ ಮನವಿ ಮಾಡಿದ್ದಾರೆ. ಮುಂಬೈ, ಥಾಣೆ, ಪಾಲ್ಘರ್, ರಾಯಗಡ್ ಸೇರಿದಂತೆ ಕೊಂಕಣದ ಅನೇಕ ಪ್ರದೇಶ ಮಳೆಯಿಂದ ಅಕ್ಷರಶಃ ಕೊಚ್ಚಿ ಹೋಗಿವೆ. ಮುಖ್ಯ ರಸ್ತೆಗಳು ಸೇರಿದಂತೆ ನಗರದ ಹಲವು ಭಾಗಗಳು ಜಲಾವೃತಗೋಂಡಿದರಿಂದ ರಸ್ತೆ ಸಂಚಾರಕ್ಕೂ ತೊಂದರೆಯಾಗಿ ಅತ್ಯಾವಶ್ಯಕ ಸೇವೆಗಳಿಗಾಗಿ ಹೋರಬಿದ್ದ ಸಿಬ್ಬಂದಿ ವರ್ಗ ಪರದಾಡುವಂತಾಗಿದೆ.
ಜಲಾವೃತಗೊಂಡ ಭಾಗಗಳು-
ಠಾಕೂರ್ ದ್ವಾರ್ ನಾಕಾ, ಗ್ರಾಂಟ್ರೋಡ ರಸ್ತೆ, ನಲ್ಬಜಾರ್, ಗೋಲ್ ದೆವುಲ್, ಜೆ. ಜೆ. ಮಾರ್ಗ ಜಂಕ್ಷನ್, ಭೆಂಡಿ ಬಜಾರ್ ಜಂಕ್ಷನ್, ಶೇಖ್ ಮಿಸ್ತ್ರಿ ದರ್ಗಾ ರಸ್ತೆ, ಹಿಂದ್ಮಾತಾ, ಸಕ್ಕರ್ ಪಂಚಾಯತ್ ಚೌಕ್, ದಾದರ್ ಟಿಟಿ, ಎಸ್‌ಐಇಎಸ್ ಕಾಲೇಜು; ಚೆಂಬೂರು, ಚುನಭಟ್ಟಿ ಬಟನ್ ಭವನ, ಮಾನ್‌ಖುರ್ಡ್ ರೈಲ್ವೆ ನಿಲ್ದಾಣ, ತಿಲಕ್‌ನಗರ; ಪಶ್ಚಿಮ ಉಪನಗರದಲ್ಲಿ ಅಂಧೇರಿ ಸಬ್‌ವೇ, ದಹಿಸರ್ ಸಬ್‌ವೇ, ಮಲಾಡ್ ಸಬ್‌ವೇ, ನ್ಯಾಷನಲ್ ಕಾಲೋನಿ (ಬಾಂದ್ರಾ).
ಸರ್ಕಾರಿ ಕಚೇರಿಗಳಿಗೆ ರಜೆ-
ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಮಂಗಳವಾರ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಯಿತು. ಆದಾಗ್ಯೂ, ಅಗತ್ಯ ಸೇವೆಗಳು ಜಾರಿಯಲ್ಲಿದ್ದವು.
ರೈಲು ಸಂಚಾರ ಸ್ಥಗಿತ-
ಸೆಂಟ್ರಲ್, ಪಶ್ಚಿಮ ಮತ್ತು ಹಾರ್ಬರ್ ರೈಲು ಸಂಚಾರ ಸ್ಥಗಿತಗೊಂಡಿವೆ. ತಗ್ಗು ಪ್ರದೇಶಗಳು ಜಲಾವೃತಗೋಂಡ ಪರಿಣಾಮ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ಅತ್ಯಾವಶ್ಯಕ ಸೇವೆಗಳಿಗಾಗಿ ಕೆಲಸಕ್ಕೆ ಹೋದ ಸಿಬ್ಬಂದಿ ವರ್ಗ ಸಾರಿಗೆ-ಸಂಚಾರವಿಲ್ಲದೆ ಪರದಾಡುವಂತಾಯಿತು.
ರಸ್ತೆ ಸಂಚಾರ ಅಸ್ತವ್ಯಸ್ಥ-
ಮುಂಬೈನ 33 ಸ್ಥಳಗಳು ಜಲಾವೃತಗೋಂಡ ಪರಿಣಾಮ ರಸ್ತೆ ಸಂಚಾರದ ಮೇಲೆ ದೊಡ್ಡ ಪರಿಣಾಮ ಬೀರಿತು. ಬೆಸ್ಟ್ ತನ್ನ 80 ಕ್ಕೂ ಹೆಚ್ಚು ಬಸ್ ಮಾರ್ಗಗಳನ್ನು ಪರಿರ್ವತಿಸ ಬೇಕಾಯಿತು. ಹಿಂದ್ಮಾತಾ, ಪ್ರತೀಕ್ಷನಗರ, ಬಾಂದ್ರಾ ಎಸ್‌ವಿ ರೋಡ್, ಗೋರೆಗಾಂವ್ ಶಾಸ್ತ್ರಿನಗರ್, ದಹಿಸರ್ ಸಬ್‌ವೇ, ಅಂಧೇರಿ ಎಸ್‌ವಿ ರೋಡ್, ಒಶಿವಾರಾ ಬ್ರೀಡ್ಜ, ಖೋದಾದಾದ್ ಸರ್ಕಲ್, ವಿದ್ಯಾವಿಹಾರ್ ನಿಲ್ದಾಣದ ಹತ್ತಿರ, ಮಲಾಡ್ ಸಬ್‌ವೇ, ಮುಲುಂಡ್ ಎಲ್ಬಿಎಸ್, ಭೆಂಡಿ ಬಜಾರ್, ದಹನುಕರ್ ವಾಡಿ, ಕಿಂಗ್ಸ್ ಸರ್ಕಲ್ ಮುಂತಾದ ಸ್ಥಳಗಳು ಜಲಾವೃತಗೋಂಡಿದರಿಂದ ಸಾರಿಗೆ ಸಂಚಾರ ಅಸ್ತವ್ಯಸ್ತವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ