ಪ್ರಗತಿವಾಹಿನಿ ಸುದ್ದಿ, ಮಾಂಜರಿ -ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ರಾಜ್ಯದಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ಧೂದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.
ಇದರಿಂದಾಗಿ ಚಿಕ್ಕೋಡಿ ವ್ಯಾಪ್ತಿಯ ಮತ್ತೊಂದು ಸೇತುವೆ ಜಲಾವೃತವಾಗಿದೆ. ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕುಡಚಿ-ಉಗಾರ ಸೇತುವೆ ಜಲಾವೃತವಾಗಿದ್ದು, ಕರ್ನಾಟಕ – ಮಹಾರಾಷ್ಟ್ರ ಸಂಪರ್ಕ ಈ ಮಾರ್ಗದಲ್ಲಿ ಕಡಿತವಾಗಿದೆ.
ರಾಯಬಾಗ ತಾಲೂಕಿನ ಕುಡಚಿ ಹಾಗೂ ಅಥಣಿ ತಾಲೂಕಿನ ಉಗಾರ ಮಧ್ಯೆ ಇರುವ ಸೇತುವೆ ಇದಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಗೆ ನದಿಗಳು ನದಿತಟದಾಟಿ ಹರಿಯುತ್ತಿವೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 8 ಸೇತುವೆಗಳು ಜಲಾವೃತವಾಗಿವೆ. ಸೇತುವೆಯ ಎರಡೂ ಕಡೆ ಪೊಲಿಸ್ ಹಾಗೂ ಜಿಲ್ಲಾಡಳಿತದಿಂದ ಬ್ಯಾರಿಕೆಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಲ್ಲಿ, ನದಿಗೆ ಇನ್ನಷ್ಟ ನೀರು ಬಿಟ್ಟಲ್ಲಿ ಪ್ರವಾಹದ ಅಪಾಯವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ